Latest

Aadhaar Rules: ಆಧಾರ್ ನಿಯಮ ಉಲ್ಲಂಘನೆಯಾದರೆ 1 ಕೋಟಿ ರೂ.ವರೆಗೆ ದಂಡ

ನವದೆಹಲಿ: ಕೇಂದ್ರ ಸರ್ಕಾರ ಯುಐಡಿಎಐ ನಿಯಮ 2021ರ ಅಧಿಸೂಚನೆ ಪ್ರಕಟಿಸಿದ್ದು, ಆಧಾರ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಕೊನೆಗೂ ದಿ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾಗೆ ಸಿಕ್ಕಿದೆ.

ಇನ್ನುಮುಂದೆ ಆಧಾರ್ ಕಾಯ್ದೆ ನಿಯಮ ಉಲ್ಲಂಘಿಸುವವರಿಗೆ 1 ಕೋಟಿ ರೂ.ವರೆಗೆ ದಂಡ ವಿಧಿಸಲು ಯುಐಡಿಎಐ ಅಧಿಕಾರ ಸಿಕ್ಕಿದ್ದು, ಯುಐಡಿಎಐ ನೀಡುವ ನಿರ್ದೇಶನ ಪಾಲಿಸದ ಮತ್ತು ಮಾಹಿತಿ ಒದಗಿಸದ ಯಾವುದೇ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.

ನಿಯಂತ್ರಣ ಪ್ರಾಧಿಕಾರಕ್ಕೆ ಇರುವ ಅಧಿಕಾರ ಈಗ ಯುಐಡಿಎಐಗೆ ಪ್ರಾಪ್ತವಾಗಿದೆ. ಆ ಮೂಲಕ ನಿಯಂತ್ರಣ ಪ್ರಾಧಿಕಾರ ಕೈಗೊಳ್ಳುವ ಕ್ರಮಗಳನ್ನು ಯುಐಡಿಎಐ ಸಹ ಕೈಗೊಳ್ಳಬಹುದಾಗಿದೆ.

Related Articles

Leave a Reply

Your email address will not be published.

Back to top button