ಸಿನಿಮಾ

Sivakarthikeyan: ಶಿವಕಾರ್ತಿಕೇಯನ್ ‘ಡಾಕ್ಟರ್’ ಚಿತ್ರದ ವಿರುದ್ಧ ಮಹಿಳಾ ಸಂಘಟನೆಗಳ ಪ್ರತಿಭಟನೆ

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಶಿವಕಾರ್ತಿಕೇಯನ್ ಅವರ ಇತ್ತೀಚೆಗೆ ಬಿಡುಗಡೆಯಾದ ‘ಡಾಕ್ಟರ್’ ಚಿತ್ರ ಎಲ್ಲರಿಂದ ಪ್ರಶಂಸಾಪತ್ರವನ್ನು ಪಡೆಯುವಲ್ಲಿ ನಿರತವಾಗಿದೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಮಹಿಳಾ ಸಂಘಟನೆಗಳು ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಯು ಆಟದಲ್ಲಿ ಸೋತಿದ್ದಕ್ಕೆ ಆತನಿಗೆ ನೈಟಿಯನ್ನು ಧರಿಸುವಂತೆ ಒತ್ತಾಯಿಸಿ ಅವನ ಕೂದಲಿಗೆ ಹೂವನ್ನು ಮುಡಿಸಿ, ಸೋತಿದ್ದಕ್ಕೆ ಮಹಿಳೆಯಂತೆ ಬಿಂಬಿಸುವ ದೃಶ್ಯವಿದೆ. ಈ ದೃಶ್ಯವು ಮಹಿಳಾ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ.

ಹಾಗಾಗಿ ಮಹಿಳಾ ಸಂಘಟನೆಗಳು ಈ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಚಿತ್ರದ ಸ್ಪೀಡ್ ಗೆ ಬ್ರೇಕ್ ಬಿದ್ದಂತಾಗಿದೆ. ಹಾಗಾಗಿ ನಿರ್ದೇಶಕ ದಿಲೀಪ್ ಮತ್ತು ಶಿವಕಾರ್ತಿಕೇಯನ್ ಅವರು ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published.

Back to top button