ಸಿನಿಮಾ

ಸೆನ್ಸರ್ ಆಫೀಸರನ ಮೆಚ್ಚಿಸಿದ ಕರಾವಳಿ ಹುಡುಗನ ಉಂಡಾಡಿಗುಂಡ ಕಿರುಚಿತ್ರ

ಉಡುಪಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪರಮಭಕ್ತ ವೀರೇಂದ್ರ ಸುವರ್ಣ ಕಟೀಲ್ ನಿರ್ಮಾಣದ ಶ್ರೀ ದುರ್ಗಾ ಸಾನಿಧ್ಯ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಉಂಡಾಡಿಗುಂಡ ಕನ್ನಡ ಕಿರುಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಮಾಡುತ್ತಿದೆ.

ಇಂದು 4 00 ಗಂಟೆಗೆ ಸಿರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿರುವ ಈ ಕಿರುಚಿತ್ರ ಸೆನ್ಸಾರ್ ನಲ್ಲಿ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ, ಹಾಗೂ ಸೆನ್ಸರ್ ಆಫೀಸರ್ ಈ ಕಿರು ಚಿತ್ರವನ್ನು ಮೆಚ್ಚಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಹಾಗೂ ನಟ ಮಾಸ್ಟರ್ ಧನ್ವಿತ್ ವಿ ಸುವರ್ಣ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡಕುಟುಂಬದಲ್ಲಿ ಹುಟ್ಟಿದ ವಿದ್ಯಾರ್ಥಿಯೊಬ್ಬನ ಕೊರೊನಾನಾ ಕಾಲದ ಕರಾಳ ದಿನವನ್ನಾ ಈ ಕಿರುಚಿತ್ರದ ಮೂಲಕ ಉತ್ತಮವಾದ ಸಂದೇಶವನ್ನು ಸಾರುತ್ತಿದೆ. ಸ್ಯಾಂಡಲ್​​​ವುಡ್ ಮತ್ತು ತುಳು ಚಿತ್ರರಂಗದ ನಟ ನಟಿಯರು ಕಿರುಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್ ಕೆ ಮಂಗಳೂರು ಕ್ಯಾಮರಾ ಕಣ್ಣಲ್ಲಿ ಸುಂದರವಾಗಿ ಮೂಡಿ ಬಂದ ಈ ಕಿರುಚಿತ್ರವನ್ನು ರಂಜಿತ್ ನಿರ್ದೇಶನ ಮಾಡಿದ್ದು ತನ್ನ ನಟನೆಯಿಂದಲೇ ಎಲ್ಲರನ್ನೂ ಮೂಕವಿಸ್ಮಿತ ರಂತೆ ಮಾಡಿದ ಮಾಸ್ಟರ್​ ಧನ್ವಿತ್ ವಿಥ್ ಸುವರ್ಣರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Related Articles

Leave a Reply

Your email address will not be published.

Back to top button