ಸಿನಿಮಾ

KARGAL NIGHTS : ಕಾರ್ಗಲ್ ನೈಟ್ಸ್ ಮೂಲಕ ಅನಾವರಣವಾಗುತ್ತಿದೆ ಪಶ್ಚಿಮಘಟ್ಟದ ಭೂಗತ ಲೋಕ

ಸ್ಯಾಂಡಲ್ ವುಡ್ ನಲ್ಲಿ ನೈಜ ಘಟನೆಗಳನ್ನು ಆಧರಿಸಿದ ಅನೇಕ ಸಿನಿಮಾಗಳು ಬಿಡುಗಡೆಯಾಗಿದ್ದು, ಸೂಪರ್ ಸಕ್ಸಸ್ ಕಂಡ ಉದಾಹರಣೆಗಳು ಸಾಕಷ್ಟಿವೆ. ರಿಯಲಿಸ್ಟಿಕ್ ಸಿನಿಮಾಗಳನ್ನು ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಡುತ್ತಾರೆ. ನೈಜ ಕಥೆ ಅಂದ್ಮೇಲೆ ಒಂದು ರೀತಿಯ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಚಂದನವನದಲ್ಲಿ ಸದ್ದಿಲ್ಲದೇ ಸಿನಿಮಾವೊಂದು ಸಿದ್ಧವಾಗಿದ್ದು, ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.

ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಟ್ರೈಲರ್ ನೋಡಿದ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಹಾಗೆ ಆ ಸಿನಿಮಾ ಮತ್ಯಾದು ಅಲ್ಲ ‘ಕಾರ್ಗಲ್ ನೈಟ್ಸ್’. ದೇವರಾಜ್ ಪೂಜಾರಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

90ರ ದಶಕದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳಲ್ಲಿ ನಡೆಯುತ್ತಿದ್ದ ಕಳ್ಳಸಾಗಾಣಿಕೆಯ ಬಗ್ಗೆ ಇರುವ ಸಿನಿಮಾ ಇದಾಗಿದೆ. ರೆಟ್ರೊ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದ್ದು, ಘೋರ ಅನುಭವಗಳನ್ನು ಆಧಾರಿಸಿ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ ‘ಕಾರ್ಗಲ್ ನೈಟ್ಸ್’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದಿಡುತ್ತಿದ್ದಾರೆ.

ಚಿತ್ರದಲ್ಲಿ ಪಶ್ಚಿಮ ಘಟ್ಟದ ಭೂಗತ ಲೋಕದ ಅನಾವರಣಗೊಳ್ಳಲಿದ್ದು, ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಗ್ ಯು ಆರ್ ಎಸ್, ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಸೂಚನ್ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ಇನ್ನು ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಾಗರ ತಾಲೂಕು ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ಕಥೆ ರಚಿಸಲಾಗಿದೆ. ಸುರೇಂದ್ರ ನಾಥ್ ಬಿ.ಆರ್. ಸಂಗೀತ ಸಂಯೋಜಿಸಿದ್ದಾರೆ. ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಕಾರ್ಗಲ್ ನೈಟ್ಸ್ ಸದ್ಯದಲ್ಲೇ ಚಿತ್ರಮಂದಿರಗಳ ಅಂಗಳಕ್ಕೆ ಬರಲು ಸಿದ್ಧವಾಗಿದೆ.

Related Articles

Leave a Reply

Your email address will not be published.

Back to top button