ಸಿನಿಮಾ

ಉಡುಪಿಯಲ್ಲಿ ಯಕ್ಷಗಾನದ ಮೂಲಕ ನಟ ಪುನೀತ್​ ರಾಜ್​​ಕುಮಾರ್​ಗೆ ಅಂತಿಮ ನಮನ

ಉಡುಪಿ: ಅಗಲಿದ ಕನ್ನಡದ ಯುವರತ್ನ ನಟ ಪುನೀತ್ ರಾಜ್ ಕುಮಾರ್ ಬಗ್ಗೆ ಯಕ್ಷಗಾಯನದ ಮೂಲಕ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ.

ಗಂಡುಕಲೆ ಯಕ್ಷಗಾನದ ಅಭಿಮಾನಿಯಾಗಿರುವ ಪುನೀತ್ ರಾಜಕುಮಾರ್ ಹಲವು ಬಾರಿ ಯಕ್ಷಗಾನದ ಹಿರಿಮೆಗೆ ಮನಸೋತು ಮಾತನಾಡಿದ್ದರು. ಜೀವನ ಪಯಣ ನಿಲ್ಲಿಸಿದ ಅಪ್ಪುಗೆ ಈ ಹಾಡನ್ನು ಅರ್ಪಣೆ ಮಾಡಲಾಗಿದೆ.

ಭಾಗವತ, ಹಿರಿಯ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾಹಿತ್ಯ ಬರೆದಿದ್ದಾರೆ. ಯಶಸ್ವೀ ಕಲಾವೃಂದ ತೆಕ್ಕಟ್ಟೆ ಪದ್ಯವನ್ನು ಪ್ರಸ್ತುತಪಡಿಸಿದೆ.

Related Articles

Leave a Reply

Your email address will not be published.

Back to top button