ಸಿನಿಮಾ
Actress Lakshmi: ಕೃಷ್ಣ ಮಠಕ್ಕೆ ಜ್ಯೂಲಿ ಖ್ಯಾತಿಯ ನಟಿ ಲಕ್ಷ್ಮೀ ಭೇಟಿ
ಉಡುಪಿ: ಬಹು ಬಾಷಾ ನಟಿ, ಜ್ಯೂಲಿ ಖ್ಯಾತಿಯ ಮಹಾಲಕ್ಷ್ಮೀ, ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಣಿಪಾಲದದ ವಿದ್ಯಾ ಸಂಸ್ಥೆಯಲ್ಲಿ ಮಗಳ ಪ್ರವೇಶಕ್ಕೊಸ್ಕರ ಬಂದಿರುವ ಮಹಾಲಕ್ಷ್ಮೀ ಸೋಮವಾರ ಬೆಳಗ್ಗೆ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಮಠದ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ಬಳಿಕ ಅವರು ಕೊಡವೂರಿನ ಸಾಯಿ ಬಾಬಾ ಮಂದಿರಕ್ಕೆ ತೆರಳಿ ಸಾಯಿ ಬಾಬಾ ದರ್ಶನ ಪಡೆದರು. ಬಹುಬಾಷಾ ನಟಿಯಾಗಿರುವ ಮಹಾಲಕ್ಷ್ಮೀ, ಲಕ್ಷೀ ಎಂದೇ ಫೇಮಸ್ಸಾಗಿದ್ದಾರೆ. ಜ್ಯೂಲಿ ಖ್ಯಾತಿಯ ಮಹಾಲಕ್ಷ್ಮೀ ಅವರ ನಟನೆಗೆ ರಾಷ್ಟ್ರೀಯ ಪ್ರಶಸ್ತಿಗಳು ದೊರಕಿದೆ. ಈ ಸಂದರ್ಬದಲ್ಲಿ ಮಾತನಾಡಿದ ಅವರು ಕೊರೋನಾದ ಬಗ್ಗೆ ತನಗೆ ಆಗುವಷ್ಟು ಜಾಗೃತಿ ಮೂಡಿಸುತ್ತಿದ್ದೇನೆ ಎಂದರು. ಮುಂದಿನ ಯೋಜನೆಯ ಬಗ್ಗೆ ಮಾಹ್ಇತಿ ನೀಡಲು ನಿರಾಕರಿಸಿದರು.