ಸಿನಿಮಾ

Bhoomi Pednekar: ಭೂಮಿ ಪೆಡ್ನೇಕರ್ ತೂಕ ಇಳಿಕೆಯ ರಹಸ್ಯವೇನು ಗೊತ್ತಾ?

ನಟಿ ಭೂಮಿ ಪೆಡ್ನೇಕರ್ ‘ದಮ್ ಲಗಾ ಕೆ ಹೈಶಾ’ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಈ ಚಿತ್ರಕ್ಕಾಗಿ ಅವರು 90 ಕೆಜಿ ತೂಕವನ್ನು ಹೊಂದಿದ್ದರು. ಆದರೆ ಬಳಿಕ ಅವರು 32 ಕೆಜಿ ಕಡಿಮೆ ಮಾಡಿಕೊಂಡರು. ಇದಕ್ಕಾಗಿ ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.

ನಟಿ ಭೂಮಿ ಪೆಡ್ನೇಕರ್ ತೂಕ ಇಳಿಸಿಕೊಳ್ಳಲು ತಜ್ಞರ ಸಲಹೆ ಪಡೆಯಲಿಲ್ಲ ಬದಲಾಗಿ ತಾಯಿಯ ಸಲಹೆ ಪಡೆದಿದ್ದಾರೆ. ಅದರಂತೆ ಅವರು ತನ್ನ ದಿನವನ್ನು ಡಿಟಾಕ್ಸ್ ನೀರನ್ನು ಸೇವಿಸುವ ಮೂಲಕ ಪ್ರಾರಂಭಿಸಿದ್ದಾರೆ. ಆಹಾರದಲ್ಲಿ ಸಕ್ಕರೆಯನ್ನು ಸೇವಿಸುವುದಿಲ್ಲ. ಬದಲಾಗಿ ಜೇನುತುಪ್ಪ, ಬೆಲ್ಲವನ್ನು ಸೇವಿಸುತ್ತಾರಂತೆ.

ಬೆಳಗಿನ ಉಪಹಾರವನ್ನು ಬಿಳಿ ಮೊಟ್ಟೆಯ ಆಮ್ಲೆಟ್, ಬ್ರೆಡ್ ಅನ್ನು ತೆಗೆದುಕೊಳ್ಳುತ್ತಾರಂತೆ. ವ್ಯಾಯಾಮದ ಬಳಿಕ 5 ಬೇಯಿಸಿದ ಮೊಟ್ಟೆಗಳನ್ನು ಸೇವಿಸುತ್ತಾರಂತೆ. ಊಟಕ್ಕೆ ಮೈಲ್ಟಿಗ್ರೈನ್ ಹಿಟ್ಟನ್ನು ಬಳಸುತ್ತಾರೆ. ಮತ್ತು ಹಸಿರು ತರಕಾರಿಗಳನ್ನು ಸೇವಿಸುತ್ತಾರಂತೆ. ಬೇಯಿಸಿದ ಚಿಕನ್ ತಿನ್ನುತ್ತಾರಂತೆ.

ಡಿನ್ನರ್ ಗೆ ತರಕಾರಿ ಚೀಸ್ ಅನ್ನು ಬ್ರೆಡ್ ನೊಂದಿಗೆ ತಿನ್ನಲು ಇಷ್ಟಪಡುತ್ತಾರಂತೆ. ರಾತ್ರಿ 8 ಗಂಟೆಯ ಮೊದಲು ಭೋಜನ ಮಾಡುತ್ತಾರಂತೆ . ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರಂತೆ.

Related Articles

Leave a Reply

Your email address will not be published.

Back to top button