Kotigobba 3: ಕಲಬುರಗಿಯಲ್ಲಿ ಕೋಟಿಗೊಬ್ಬನಿಗೆ ಹಾಲಿನ ಅಭಿಷೇಕ
ಕಲಬುರಗಿ: ತಾಂತ್ರಿಕ ದೋಷದಿಂದ ಬಿಡುಗಡೆಯಾಗದೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದ, ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ – 3 ಇಂದು ಅದ್ದೂರಿಯಾಗಿ ತೆರೆ ಕಂಡಿದ್ದು. ಕಲ್ಬುರ್ಗಿಯಲ್ಲಿ ಸುದೀಪ್ ಅಭಿಮಾನಿಗಳು ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದರು.
ನಗರದ ಸಂಗಮ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ನಿನ್ನೆ ಬಿಡುಗಡೆಯಾಗಬೇಕಿದ್ದ ಸುದೀಪ್ ಅಭಿನಯದ ಕೋಟಿಗೊಬ್ಬ- 3 ಸಿನಿಮಾ ತಾಂತ್ರಿಕ ದೋಷದಿಂದ ತಡವಾಗಿ ನಿನ್ನೆ ಬದಲು ಇಂದು ಒಂದು ದಿನ ವಿಳಂಬವಾಗಿ ರಾಜ್ಯಾದ್ಯಂತ ಅದ್ದೂರಿ ಬಿಡುಗಡೆಯಾಗಿದೆ. ಈ ಹಿನ್ನೆಲೆ ರಾಜ್ಯದಾದ್ಯಂತ ಕಿಚ್ಚನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಕಲಬುರಗಿಯಲ್ಲಿಯೂ ಸಹ ಶೆಟ್ಟಿ, ಸಂಗಮ್ ತ್ರಿವೇಣಿ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಸಿನಿಮಾ ಬಿಡುಗಡೆಯಾಗಿದ್ದು. ನಗರದ ಸಂಗಮ ಟಾಕೀಸ್ ಬಳಿ ಕಿಚ್ಚನ ಅಭಿಮಾನಿಗಳು ಸಂಭ್ರಮ ಹಿಮ್ಮಡಿಗೊಳಿಸಿದೆ. ಸುದೀಪ್ ಅವರ ಕಟೌಟ್ ಗೆ ಹೂಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಬೆಳಗ್ಗೆಯಿಂದಲೇ ಟಿಕೆಟ್ ಗಾಗಿ ಕಾದುಕುಳಿರ ಅಭಿಮಾನಿ ಬೆಳಗ್ಗೆ 11 ಗಂಟೆಗೆ ಮೊದಲ ಶೋ ಪ್ರಾರಂಭವಾಗುತ್ತಿದ್ದಂತೆ ಸಂಭ್ರಮ ಆಚರಿಸಿದರು.
ಒಟ್ಟಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಚಿತ್ರ ಒಂದು ದಿನ ತಡವಾಗಿ ಬಿಡುಗಡೆಯಾಗಿರುವ ಅವರ ಅಭಿಮಾನಿಗಳಲ್ಲಿ ಬೇಸರ ಹುಟ್ಟಿಸಿದರೆ. ನಾಡಹಬ್ಬ ದಸರಾ ದಿನವಾದ ಇಂದು ಸಿನಿಮಾ ಅದ್ದೂರಿ ತೆರೆಕಂಡಿದ್ದ ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.