ಹುಬ್ಬಳ್ಳಿಯಲ್ಲಿ ಕೋಟಿಗೊಬ್ಬ-3ಗೆ ಅದ್ದೂರಿಯಾಗಿ ಸ್ವಾಗತಿಸಿದ ಕಿಚ್ಚನ ಅಭಿಮಾನಿಗಳು
ಧಾರವಾಡ: ಹುಬ್ಬಳ್ಳಿಯಲ್ಲಿ ಕಳೆದ ದಿನ ರದ್ದುಗೊಂಡಿದ್ದ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಲನಚಿತ್ರವು ಶೋ ಇಂದು ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲ್ಲೇ ಥಿಯೇಟರ್ಗಳ ಕಡೆ ಕಿಚ್ಚನ ಅಭಿಮಾನಗಳು ಮುಖಮಾಡಿದ್ದಾರೆ.
ನಗರದ ಸುಜಾತಾ ಚಿತ್ರ ಮಂದಿರದಲ್ಲಿ ಕೋಟಿಗೊಬ್ಬ -3 ಚಿತ್ರ ಪ್ರಮುಖ ದರ್ಶನ ಇಂದಿನಿಂದ ಆರಂಭವಾಗಿದೆ. ಹಾಗಾಗಿ ಈಗ ಕಳೆದೊಂದು ವರ್ಷದಿಂದ ಕೋಟಿಗೊಬ್ಬ ಚಿತ್ರ ನೋಡಲು ಕಾದು ಕುಳಿತಿದ್ದ ಕಿಚ್ಚನ ಅಭಿಮಾನಿಗಳು, ಚಿತ್ರಮಂದಿರದ ಮುಂಭಾಗದಲ್ಲಿನ ನಟ ಸುದೀಪ್ ಕಟೌಟ್ ಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ಹಾಗೂ ತೆಂಗಿನಕಾಯಿ ಒಡೆದು ಕೋಟಿಗೊಬ್ಬ -3 ಚಿತ್ರಕ್ಕೆ ಸ್ವಾಗತ ಕೋರಿದ್ದಾರೆ.
ವಿಜಯ ದಶಮಿ ಹಬ್ಬವನ್ನು ಮರೆತು ಕಿಚ್ಚನ ಅಭಿಮಾನಿಗಳು ಚಿತ್ರಮಂದಿರಕಡೆಗೆ ಮುಖಮಾಡಿದ್ದು, ಮೊದಲನೇ, ಎರಡನೇ ಶೋ ಟಿಕೆಟ್ ಗಳು ಈಗಾಗಲೇ ಸೋಲ್ಡೌಟ್ ಆಗಿವೆ. ಇನ್ನೂ ಕೊನೆಯ ಶೋ ಟಿಕೆಟಾದ್ರೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಿಚ್ಚನ ಅಭಿಮಾನಿಗಳು ಈಗ ಟಿಕೆಟ್ ಗಾಗಿ ಚಿತ್ರಮಂದಿರಲ್ಲಿ ಕಾಯುತ್ತಿದ್ದಾರೆ.