Thalapathy Vijay: ವಿಜಯ್ ‘ ಬೀಸ್ಟ್’ ಚಿತ್ರದ ಬಿಟಿಎಸ್ ವಿಡಿಯೋ ಸೋರಿಕೆ
ಮಾಸ್ಟರ್ ಚಿತ್ರದ ಬಳಿಕ ವಿಜಯ್ ಅವರು ನೆಲ್ಸನ್ ದಿಲೀಪ್ ಕುಮಾರ್ ಅವರ ಜೊತೆ ಕೈಜೋಡಿಸಿದ್ದಾರೆ. ಚಿತ್ರ ಚಿತ್ರೀಕರಣ ಪೂರ್ಣಗೊಳ್ಳುತ್ತಿದೆ. ಇತ್ತೀಚೆಗೆ ವಿಜಯ್ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್ ಲುಕ್ ಆನ್ನು ಬಿಡುಗಡೆ ಮಾಡಲಾಯಿತು. ಆದರೆ ಇದೀಗ ಈ ಚಿತ್ರತಂಡಕ್ಕೆ ಒಂದು ಶಾಕ್ ಎದುರಾಗಿದೆ.
ಅದೇನೆಂದರೆ ಚಿತ್ರಕರಣ ಸ್ಥಳದಲ್ಲಿ ಫೋನ್ ಅನ್ನು ನಿಷೇಧಿಸಿದರೂ ಕೂಡ ಚಿತ್ರದ ಸೆಟ್ ನಿಂದ ವಿಜಯ್ ಒಳಗೊಂಡ ದೃಶ್ಯದ ವಿಡಿಯೋ ಒಂದು ಸೋರಿಕೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಿಜಯ್ ಸ್ಟೈಲಿಶ್ ಆಗಿ ಕಪ್ಪು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ದೊಡ್ಡ ಪರದೆಯಲ್ಲಿ ವಿಜಯ್ ಅವರನ್ನು ಕಂಡು ಆನಂದಿಸುವ ಗುರಿಯನ್ನು ಹೊಂದಿದ್ದ ಅಭಿಮಾನಿಗಳಿಗೆ ಈ ಬಗ್ಗೆ ಅಸಮಾಧಾನವಾಗಿದೆ. ಹಾಗಾಗಿ ಇಂತಹ ಚಟುವಟಿಕೆಗಳನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ವಿಜಯ್ ಅವರ ಬೀಸ್ಟ್ ಚಿತ್ರ ಕಳ್ಳಸಾಗಣಿಕೆಯ ಕಥೆಯನ್ನು ಆಧರಿಸಿದ್ದು, ಆಕ್ಷನ್, ರೊಮ್ಯಾನ್ಸ್ ಮತ್ತು ಹಾಸಗಯ ಮಿಶ್ರಣವಾಗಿದೆ. ಇದರಲ್ಲಿ ವಿಜಯ್ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ.