ಸಿನಿಮಾ

ಬಾಲಿವುಡ್ ನಟ ಶಾರುಖ್ ಖಾನ್ ಬೆಂಬಲಕ್ಕೆ ನಿಂತ ಇಬ್ಬರು ನಟಿಯರು ಯಾರು ಗೊತ್ತಾ?

ಮುಂಬೈನ ಕ್ರೂಸ್ ಹಡುಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಅನ್ನು ಬಂಧಿಸಲಾಗಿದೆ. ಇದರಿಂದ ನೊಂದಿದ್ದ ಶಾರುಖ್ ಖಾನ್ ಬೆಂಬಲಕ್ಕೆ ಸುನೀಲ್ ಶೆಟ್ಟಿ, ಸಲ್ಮಾನ್ ಖಾನ್ ಮುಂತಾದ ನಟರು ನಿಂತಿದ್ದರು. ಆದರೆ ಇತ್ತೀಚೆಗೆ ನಟಿಯರಿಬ್ಬರು ಟ್ವೀಟ್ ಮೂಲಕ ನಟನಿಗೆ ಬೆಂಬಲ ಸೂಚಿಸಿದ್ದಾರೆ.

ಆರ್ಯನ್ ಬಂಧನದ ಬಗ್ಗೆ ಬಾಲಿವುಡ್ ನಟಿಯರಾದ ಪೂಜಾ ಭಟ್ ಮತ್ತು ಸುಚಿತ್ರಾ ಕೃಷ್ಣಮೂರ್ತಿ ಅವರು ಟ್ವಿಟ್ ಮಾಡಿದ್ದಾರೆ. ‘ಚಹತ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದ ಪೂಜಾ ಭಟ್ , ಶಾರುಖ್ ನಾನು ನಿಮ್ಮೊಂದಿಗೆ ನಿಂತಿದ್ದೇನೆ. ನಿಮಗೆ ಅದು ಬೇಕಾಗಿಲ್ಲ, ಆದರೆ ನನ್ನ ಬೆಂಬಲ ನಿಮಗಿದೆ ಎಂದು ಕೈ ಸೇರುವ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಸುಚಿತ್ರಾ ಕೃಷ್ಣಮೂರ್ತಿ ಅವರು ಟ್ವಿಟ್

ಹಾಗೇ ‘ಕಭಿ ಯಾ ಕಭಿ ನಾಮ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ ನಟಿ ಸುಚಿತ್ರಾ, ತಮ್ಮ ಮಗು ತೊಂದರೆಯಲ್ಲಿರುವುದನ್ನು ನೋಡುವುದಕ್ಕಿಂತ ಹೆತ್ತವರಿಗೆ ಕಷ್ಟ ಏನೂ ಇಲ್ಲ. ಬಾಲವುಡ್ ಅನ್ನು ಗುರಿಯಾಗಿಸಿಕೊಂಡು ಚಿತ್ರ ತಾರೆಯರ ಮೇಲೆ ಎನ್ ಸಿಬಿ ದಾಳಿ ಮಾಡಿತು. ಆದರೆ ಯಾವುದೂ ಸಾಬೀತಾಗಿಲ್ಲ. ಇದು ಅದೇ ರೀತಿ ಆಗುತ್ತದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button