ಸಿನಿಮಾ

“ಮತ್ತೆ ಹುಟ್ಟಿ ಬಾ ಅಪ್ಪು ” ಅಗಲಿದ ಪುನೀತ್ ರಾಜ್ ಕುಮಾರ್ ಗೆ ದೀಪ ನಮನ

ಉಡುಪಿ: ಹಠಾತ್ ಅಗಲುವಿಕೆಯಿಂದ ಇಡೀ ರಾಜ್ಯದ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ತಳ್ಳಿದ ಪುನೀತ್ ರಾಜ್ ಕುಮಾರ್ ಅವರಿಗೆ ಕುಂದಾಪುರದ ಡಾ. ರಾಜ್ ಅಭಿಮಾನಿ ಸಂಘಟನೆ ವತಿಯಿಂದ ದೀಪಗಳನ್ನು ಬೆಳಗಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹೊಸ ಬಸ್ ನಿಲ್ದಾಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಟ ಪುನೀತ್​ ಅವರ ಹಠಾತ್ ನಿರ್ಗಮನದಿಂದ ಒಡ ಹುಟ್ಟಿದ ಸಹೋದರನನ್ನೇ ಕಳೆದು ಕೊಂಡನಂತಹ ಶೂನ್ಯ ಭಾವ ಆವರಿಸಿದಂತಾಗಿದೆ. ಇಂತಹ ಹೃದಯವಂತ, ಮಾನವೀಯ ಮಹಾ ಚೇತನ ಮರೆಯಾಗಿದ್ದು ಆ ನೋವನ್ನು ವ್ಯಕ್ತಪಡಿಸಲು ಯಾವ ಪದಗಳಿಂದಲೂ ಅಸಾಧ್ಯ ಎಂದು ಪುನೀತ್ ಅಭಿಮಾನಿಗಳು ಕಂಬನಿ ಮಿಡಿದರು. ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೂಡ ದೀಪವನ್ನು ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಕಬ್ಬಡ್ಡಿ ಆಟಗಾರ ತನ್ವಿರ್ ಕುಂದಾಪುರ, ಸುನಿಲ್ ಖಾರ್ವಿ ತಲ್ಲೂರು, ಶ್ರೀಧರ್ ಗಾಣಿಗ, ಪ್ರಭಾಕರ್ ಖಾರ್ವಿ, ಅಗಸ್ಟಿನ್ ಡಿಸೋಜ, ಮಝರ್ ಕುಂದಾಪುರ, ಸಂತೋಷ್ ಕುಂದೇಶ್ವರ, ಗಾಳಿ ಮಾಧವ ಖಾರ್ವಿ, ಡುಂಡಿರಾಜ್ , ಕಿಶನ್ ಖಾರ್ವಿ, ನವೀನ್ ಕುಮಾರ್, ನಾರಾಯಣ ಗಾಣಿಗ, ನಾಗರಾಜ್ ಖಾರ್ವಿ, ಸೂರ್ಯ ದೇವಾಡಿಗ, ಶಿವರಾಜ್ ಖಾರ್ವಿ, ಗುರು ಖಾರ್ವಿ, ಪ್ರಸಾದ್ ಗಾಣಿಗ ಕೋಡಿ ಮುಂತಾದವರು ಭಾಗವಹಿಸಿ ನುಡಿನಮನಗಳನ್ನು ಅರ್ಪಿಸಿದರು.

Related Articles

Leave a Reply

Your email address will not be published.

Back to top button