ಸಿನಿಮಾ
ಬಾಗಲಕೋಟೆಯ ವಾಸವಿ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರ್ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ
ಬಾಗಲಕೋಟೆ: ಪವರ್ ಸ್ಟಾರ್, ನಟ ಪುನೀತ್ ರಾಜ್ ಕುಮಾರ್ ಅವರಿಗೆ ಬಾಗಲಕೋಟೆ ಚಿತ್ರಮಂದಿರಗಳಲ್ಲೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಾಗಲಕೋಟೆ ನಗರದಲ್ಲಿರುವ ವಾಸವಿ ಚಿತ್ರಮಂದಿರದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುನೀತ್ ರಾಜಕುಮಾರ್ ಮತ್ತೆ ಹುಟ್ಟಿ ಬಾ ಎಂದು ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಈ ವೇಳೆ ವಾಸವಿ ಚಿತ್ರಮಂದಿರದ ಮಾಲೀಕ ಸಂಜಯ್ ಜೋಷಿ, ಪುನೀತ್ ರಾಜಕುಮಾರ್ ಅವರ ಸಿನಿಮಾಗಳ ಮೂಲಕ ನೆನೆದರು.
ಚಿತ್ರಮಂದಿರದಲ್ಲಿರೋ ಸೀಟುಗಳು ಸಹ ಅಪ್ಪು ಬೇಕೆಂದು ಕೇಳುತ್ತಿವೆ.ದೊಡ್ಮನೆ ಹುಡುಗ ನೀನು ಇಷ್ಟು ಬೇಗ ನಮ್ಮೆನ್ನೆಲ್ಲಾ ಅಗಲಿ ಹೋದೆ.ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.ಈ ವೇಳೆ ಚಿಕ್ಕಮಕ್ಕಳು ಮಹಿಳೆಯರು ಅಭಿಮಾನಿಗಳು ಭಾಗಿಯಾಗಿದ್ದರು.