ಸಿನಿಮಾ
Sharukh Khan: ಆರ್ಯನ್ ನಿಂದ ಶಾರುಖ್ ಖಾನ್ ನ ಎಲ್ಲಾ ಜಾಹೀರಾತುಗಳಿಗೆ ನಿಷೇಧ ಹೇರಿದ BYJU
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಕ್ರೂಸ್ ಡ್ರಗ್ಸ್ ಪ್ರಕರಣದಿಂದಾಗಿ ಚರ್ಚೆಯಲ್ಲಿದ್ದಾರೆ. ಇದರ ಪರಿಣಾಮ ಶಾರುಖ್ ಖಾನ್ ಅವರ ವೃತ್ತಿಪರ ಜೀವನದ ಮೇಲೂ ಕಾಣುತ್ತಿದೆ. ಸದ್ಯಕ್ಕೆ ಶಾರುಖ್ ಖಾನ್ ಅವರ ಎಲ್ಲಾ ಜಾಹೀರಾತುಗಳನ್ನು BYJU ನಿಷೇಧಿಸಿದೆ.
ಆರ್ಯನ್ ವಿಚಾರದಲ್ಲಿ ಅನೇಕರು ಶಾರುಖ್ ಖಾನ್ ಅವರನ್ನು ಬೆಂಬಲಿಸಿದರೆ ಅನೇಕರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ ಅನೇಕರು ಬೈಜು ಅವರ ಲರ್ನಿಂಗ್ ಆ್ಯಪ್ ಅನ್ನು ಟ್ರೋಲಿಂಗ್ ನಲ್ಲಿ ಎಳೆಯುತ್ತಿದ್ದಾರೆ. ಶಾರುಖ್ ಖಾನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುವ ಮೂಲಕ ಕಂಪೆನಿ ಯಾವ ಸಂದೇಶ ನೀಡುತ್ತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ ನಿಂದಾಗಿ ಬೈಜುವಿನ ಹಲವು ಮೀಮ್ ಗಳು ವೈರಲ್ ಆಗುತ್ತಿದೆ. ಇದರಿಂದ ಕಂಪೆನಿಯ ಇಮೇಜ್ ಹಾಳಾಗುತ್ತಿದೆ. ಹಾಗಾಗಿ ಶಾರುಖ್ ಖಾನ್ ಅವರ ಎಲ್ಲಾ ಜಾಹೀರಾತುಗಳನ್ನು BYJU ನಿಷೇಧಿಸಿದೆ ಎನ್ನಲಾಗುತ್ತಿದೆ.