Yami Gauthami: ಗುಣಪಡಿಸಲಾಗದ ಚರ್ಮದ ಸಮಸ್ಯೆಗೆ ಒಳಗಾದ ನಟಿ ಯಾಮಿ ಗೌತಮಿ
ಭಾರತೀಯ ಚಿತ್ರರಂಗದ ಖ್ಯಾತ ನಟಿ ಯಾಮಿ ಗೌತಮಿ ಅವರು ಗುಣಪಡಿಸಲಾಗದ ಚರ್ಮದ ಸಮಸ್ಯೆಯನ್ನು ಹೊಂದಿದ್ದು, ತಮ್ಮ ಈ ಸ್ಥಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.
ನಟಿ ಯಾಮಿ ಗೌತಮಿ ಅವರು ತಮಗೆ ಕೆರಾಟೋಸಿಸ್ ಪಿಲಾರಿಸ್ ಎಂಬ ಒಂದು ರೀತಿಯ ಗುಣಪಡಿಸಲಾಗದ ಚರ್ಮದ ಸ್ಥಿತಿಯನ್ನು ಹಲವು ವರ್ಷಗಳಿಂದ ಅನುಭವಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ ನಟಿ, ತನ್ನ ಇತ್ತೀಚಿನ ಫೋಟವನ್ನು ಹಂಚಿಕೊಂಡು, ಈ ಸ್ಥಿತಿಯು ಚರ್ಮದ ಮೇಲೆ ಸಣ್ಣ ಉಬ್ಬುಗಳೊಂದಿಗೆ ಒಣ ಮತ್ತು ಒರಟಾದ ಚರ್ಮವನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.
ಹದಿಹರೆಯದ ವಯಸ್ಸಿನಲ್ಲಿ ತಾನು ಈ ಚರ್ಮದ ಸ್ಥಿತಿಯನ್ನು ಹೊಂದಿದ್ದು, ಅದಕ್ಕೆ ಚಿಕಿತ್ಸೆ ಇಲ್ಲ. ಹಾಗಾಗಿ ನಾನು ಇದನ್ನು ಹಲವು ವರ್ಷಗಳಿಂದ ಅನುಭವಿಸುತ್ತಿದ್ದೇನೆ. ಈಗ ಅಂತಿಮವಾಗಿ ನನ್ನ ಎಲ್ಲಾ ಭಯ ಮತ್ತು ಅಭದ್ರತೆಯನ್ನು ಹೋಗಲಾಡಿಸಲು ನಿರ್ಧರಿಸಿದ್ದೇನೆ. ಹಾಗಾಗಿ ಇದನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.