ಸಿನಿಮಾ
Sayani Gupta: ತಮ್ಮ ಹುಟ್ಟುಹಬ್ಬ ದಿನದಂದು ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದ ನಟಿ ಸಯಾನಿ ಗುಪ್ತಾ
ನಟಿ ಸಯಾನಿ ಗುಪ್ತಾ ತಮ್ಮ ಹುಟ್ಟುಹಬ್ಬ ದಿನದಂದು ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿವಹಿಸಿ ಶಾಲಾ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದ್ದಾರೆ.
ಕಳೆದ ವರ್ಷ ನಟಿ ತನ್ನ ಜನ್ಮ ದಿನದಂದು ಸಯಾನಿ ಗುಪ್ತಾ ಅವರು ಅನಾಥಾಶ್ರಮದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದ್ದಾರೆ. ಈ ಬಾರಿ ಹರಿಯಾಣದ ಘಮ್ರೋಜ್ ನ ಸರ್ಕಾರಿ ಬಾಲಕಿಯರ ಹಿರಿಯ ಮಾಧ್ಯಮ ಶಾಲೆಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ, ಪ್ಯಾಡ್ ನಂತಹ ಮೂಲಭೂತ ಅವಶ್ಯಕ ವಸ್ತು ಇನ್ನೂ ದೇಶದ ವಿವಿಧ ಭಾಗಗಳಲ್ಲಿ ಮರೀಚಿಕೆಯಾಗಿದೆ. ಯುವತಿಯರು ತಮ್ಮ ಅವಧಿಗಳಲ್ಲಿ ಬಟ್ಟೆಗಳನ್ನು ಬಳಸುತ್ತಿರುವುದು ಯೋಚಿಸಿದರೆ ದುಃಖಕರವಾಗುತ್ತದೆ. ಹಾಗಾಗಿ ಇದು ಎಲ್ಲರಿಗೂ ಕೈಗೆಟುಕುವ ಹಾಗೇ ಮಾಡುವುದು ನನ್ನ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.