ಸಿನಿಮಾ
Kangana Ranaut: ಈ ಬಾಲಿವುಡ್ ನಟಿಯನ್ನು ತನ್ನ ‘ಗಾಡ್ ಮದರ್ ‘ ಎಂದ ನಟಿ ಕಂಗನಾ
ಬಾಲಿವುಡ್ ನ ಹಿರಿಯ ನಟಿ ರೇಖಾ ಅವರು ಅಕ್ಟೋಬರ್ 10ರಂದು ತನ್ನ 67ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅನೇಕ ಸಿನಿಮಾ ತಾರೆಯರು ಮತ್ತು ಅಭಿಮಾನಿಗಳು ಅಭಿನಂದಿಸಿದ್ದಾರೆ.
ತಲೈವಿ ನಟಿ ಕಂಗನಾ ಅವರು ಕೂಡ ನಟಿ ರೇಖಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅವರನ್ನು ತನ್ನ ಗಾಡ್ ಮದರ್ ‘ ಎಂದು ಬಣ್ಣಿಸಿದ್ದಾರೆ. ಜೊತೆಗೆ ರೇಖಾ ಅವರ ಜೊತೆಗಿರುವ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಸುಂದರವಾಗಿ ಕಾಣಿಸುತ್ತಿದ್ದಾರೆ.
ನಟಿ ರೇಖಾ ಮತ್ತು ಕಂಗನಾ ಇಬ್ಬರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಪ್ರಶಸ್ತಿ ಸಮಾರಂಭವೊಂದರಲ್ಲಿ ರೇಖಾ ಅವರು ತನಗೆ ಮಗಳಿದ್ದಲ್ಲಿ ಆಕೆ ಕಂಗನಾಳಂತೆ ಇರುತ್ತಿದ್ದಳು ಎಂದು ಹೇಳಿದ್ದರು. ಆ ಸಮಯದಲ್ಲಿ ರೇಖಾ ತಾನು ಧರಿಸಿದ್ದ ಕಪ್ಪು ಸೀರೆಯನ್ನು ಕಂಗನಾಗೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗುತ್ತಿದೆ