ಸಿನಿಮಾ

Rakul Preet Singh: ರಾಕುಲ್ ಪ್ರೀತ್ ತನ್ನ ಸಂಬಂಧವನ್ನು ಜಾಕಿ ಭಗ್ನಾನ ಜೊತೆ ಅಧಿಕೃತಗೊಳಿಸಿದ್ದಾರೆಯೇ?

ಅಕ್ಟೋಬರ್ 10ರಂದು ರಾಕುಲ್ ಪ್ರೀತ್ ತನ್ನ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ ಅವರು ಇನ್ ಸ್ಟಾಗ್ರಾಂನಲ್ಲಿ ಪೋಟೊವೊಂದನ್ನು ಪೋಸ್ಟ್ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಶರುವಾಗಿದೆ.

ಅಕ್ಟೋಬರ್ 10ರಂದು ರಾಕುಲ್ ಪ್ರೀತ್ ಮತ್ತು ಜಾಕಿ ಭಗ್ನಾನಿ ತಮ್ಮ ಕೈಗಳನ್ನು ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಮತ್ತು ಅದಕ್ಕೆ ಹೃದಯದ ಶೀರ್ಷಿಕೆಗಳನ್ನು ನೀಡಿದ್ದಾರೆ. ಜೊತೆಗೆ ಥ್ಯಾಂಕ್ಯೂ ನನ್ನ ಪ್ರೀತಿಯೇ! ಈ ವರ್ಷ ನೀನು ನನ್ನ ಬಹುದೊಡ್ಡ ಉಡುಗೊರೆ “ ಎಂದು ಬರೆದಿದ್ದಾರೆ.

ಈ ಮೂಲಕ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

Related Articles

Leave a Reply

Your email address will not be published.

Back to top button