ಸಿನಿಮಾ

Priyanka Chopra: ಡ್ರೆಸ್ ವಿಚಾರದಕ್ಕೆ ಟ್ರೋಲ್ ಆದ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಅತ್ಯುತ್ತಮ ಶೈಲಿಯ ಡ್ರೆಸ್ ಗಳಿಂದ ಹೆಸರು ವಾಸಿಯಾಗಿದ್ದಾರೆ. ಅವರ ಹೊಸ ಶೈಲಿಯ ಲುಕ್ ತಕ್ಷಣ ವೈರಲ್ ಆಗುತ್ತದೆ. ಇತ್ತೀಚೆಗೆ ಅವರು ಧರಿಸಿದ ಡ್ರೆಸ್ ವೊಂದು ಟ್ರೋಲ್ ಆಗಿದೆ.

ನಟಿ ಪ್ರಿಯಾಂಕಾ ಚೋಪ್ರಾ ತನ್ನ ಪತಿಯೊಂದಿಗೆ ಔತಣಕೂಟಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಆ ವೇಳೆ ಅವರು ಧರಿಸಿದ ಡ್ರೆಸ್ ಟ್ರಾನ್ಸ್​​ಪರೆಂಟ್ ಆಗಿತ್ತು. ಪ್ರಿಯಾಂಕಾ ಧರಿಸಿದ್ದ ಉಡುಗೆ ಮೇಲೆ ಸರಳ ಕಪ್ಪು ತೊಳಿಲ್ಲದ ಮೇಲ್ಭಾಗವಿತ್ತು. ಆದರೆ ಉಡುಪಿನ ಕೆಳಭಾಗದಲ್ಲಿ ಹಸಿರು ಮತ್ತು ಕಪ್ಪು ಬಣ್ಣಗಳಿಂದ ಮಾಡಿದ ಹೂವಿನ ಮಾದರಿಯ ಕಪ್ಪು ಬಣ್ಣದ ಪಾರದರ್ಶಕವಾದ ಸ್ಕರ್ಟ್ ಇತ್ತು. ಇದಕ್ಕೆ ಸಂಬಂಧಿಸಿದ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಧರಿಸಿದ ಉಡುಪು ಲಂಡನ್ ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಕಟೆರಿನಾ ಕುಖರೇವಾ ವಿನ್ಯಾಸಗೊಳಿಸಿದ್ದಾರೆ. ಇವರು ನಟಿ ಪ್ರಿಯಾಂಕಾ ಅವರ ಫೋಟೊಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಉಡುಪಿನ ಬೆಲೆ 625 ಪೌಂಡ್ ಅಂದರೆ ಸುಮಾರು 58 ಸಾವಿರ ರೂಪಾಯಿಗಳು ಎಂಬುದಾಗಿ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button