ಸಿನಿಮಾ

Priyanka Chopra: ಪತಿ ನಿಕ್ ಜೋನಸ್ ನ ಈ ವಿಚಾರವನ್ನು ಬಹಿರಂಗಪಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಇಬ್ಬರೂ ವಿಭಿನ್ನ ಹಿನ್ನಲೆಯಿಂದ ಬಂದವರು ಆದರೂ ಇಬ್ಬರೂ ತಮ್ಮ ಸಂಪ್ರದಾಯಗಳನ್ನು ಒಟ್ಟಿಗೆ ನಡೆಸಿಕೊಂಡು ಬರುತ್ತಿದ್ದಾರೆ. ನಿಕ್ ಮತ್ತು ಪ್ರಿಯಾಂಕಾ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಆದರೆ ಇಬ್ಬರು ಪರಸ್ಪರರ ಧರ್ಮವನ್ನು ಸಮಾನವಾಗಿ ಗೌರವಿಸುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಪ್ರಿಯಾಂಕಾ ಮತ್ತು ನಿಕ್ ತಮ್ಮ ರೆಸ್ಟೋರೆಂಟ್ ಉದ್ಘಾಟನೆಯಲ್ಲಿ ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕಾ, ವಿಶೇಷ ಸಂದರ್ಭವಿದ್ದಾಗಲೆಲ್ಲಾ ನಿಕ್ ತನ್ನನ್ನುದೇವರ ಪೂಜೆ ಮಾಡಲು ಕೇಳಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.

ಅಲ್ಲದೇ ನಮ್ಮ ನಂಬಿಕೆ ಮತ್ತು ನಮ್ಮ ಸಂಬಂಧಕ್ಕೆ ಬಂದಾಗ ನಾನು ಮತ್ತು ನಿಕ್ ಒಂದೇ ಸಾಲಿನಲ್ಲಿ ಇದ್ದೇವೆ. ಸಹಜವಾಗಿ ನಾವು ವಿವಿಧ ಧರ್ಮದವರಾದರೂ ದೇವರನ್ನು ನಂಬುತ್ತೇವೆ. ನಾವಿಬ್ಬರೂ ಒಂದೇ ಸಾಲಿನಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button