ಕಪ್ಪು ಗೌನ್ ನಲ್ಲಿ ಹಾಟ್ ಆಗಿ ಕಾಣಿಸಿದ ದಿಶಾ ಪಟಾನಿ ಪೋಟೊಗೆ ಟೈಗರ್ ಶ್ರಾಫ್ ಕಾಮೆಂಟ್ ಏನು ಗೊತ್ತಾ?
ದಿಶಾ ಪಟಾನಿ ಬಾಲಿವುಡ್ ನ ಖ್ಯಾತ ನಟಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ರಜಾ ದಿನಗಳ ಫೋಟೊಶೂಟ್ ಅನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಅವರು ಕಪ್ಪು ಗೌನ್ ನಲ್ಲಿ ತಮ್ಮ ಹಾಟ್ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳ ಜೊತೆಗೆ ಟೈಗರ್ ಶ್ರಾಫ್ ಕೂಡ ಕಾಮೆಂಟ್ ಮಾಡಿದ್ದಾರೆ.
ಫೋಟೊದಲ್ಲಿ ನಟಿ ದಿಶಾ ಕಪ್ಪು ಬಣ್ಣದ ಸ್ಟ್ರಾಪ್ ಲೆಸ್ ರಫಲ್ ಗೌನ್ ಧರಿಸಿದ್ದಾಳೆ. ಅದರಲ್ಲಿ ತಮ್ಮ ಕೂದಲನ್ನು ಮುದ್ದಾಡುತ್ತಿದ್ದಾಳೆ. ಇದರಲ್ಲಿ ದಿಶಾ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಇದಕ್ಕೆ ಬಾಲಿವುಡ್ ನಟ ಟೃಗರ್ ಶ್ರಾಫ್ ಕೂಡ ಕಾಮೆಂಟ್ ಮಾಡಿ, ಫೈರ್ ಆ್ಯಂಡ್ ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ.
ನಟನ ಕಾಮೆಂಟ್ ಗೆ ಕೆಲವು ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿ, ಹುಲಿ ಈಗ ಜೀವವಾಗಿದೆ ಎಂದು ತಮಾಷೆ ಮಾಡಿದ್ದಾರೆ. ಹಾಗೇ ಕೆಲವರು ದಿಶಾಳ ಅಂದವನ್ನು ಹೊಗಳಿದ್ದಾರೆ. ನಟಿ ದಿಶಾ ಅವರ ಈ ಫೋಟೊವನ್ನು ಪ್ರಸಿದ್ಧ ಫೋಟೋಗ್ರಾಫರ್ ಸಾಶಾ ಜಯರಾಮ್ ಕ್ಲಿಕ್ಕಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.