ಸಿನಿಮಾ
Aishwarya Rai Bachchan: ಮಗಳ ವಿಚಾರಕ್ಕೆ ಮತ್ತೆ ಟ್ರೋಲ್ ಆದ ನಟಿ ಐಶ್ವರ್ಯಾ ರೈ
ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸೋಮವಾರ ಬೆಳಿಗ್ಗೆ ಮಗಳು ಆರಾಧ್ಯ ಜೊತೆ ಪ್ಯಾರಿಸ್ ನಿಂದ ಮರಳಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊ ಮತ್ತು ವಿಡಿಯೋ ವೈರಲ್ ಆಗಿದ್ದು, ನಟಿಯನ್ನು ಟ್ರೋಲ್ ಮಾಡಲಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯ ಮತ್ತು ಅವರ ಕುಟುಂಬದವರು ಕಂಡುಬಂದಿದ್ದಾರೆ. ಆ ವೇಳೆ ನಟಿ ಐಶ್ವರ್ಯಾ ರೈ ತನ್ನ ಮಗಳಾದ ಆರಾಧ್ಯಳ ಕೈ ಹಿಡಿದುಕೊಂಡು ನಡೆಯುತ್ತಿರುವುದು ಕಂಡುಬಂದಿದೆ. ಇದಕ್ಕೆ ಜನರು ಅನೇಕ ಕಾಮೆಂಟ್ ಗಳನ್ನು ಮಾಡಿದ್ದಾರೆ.
ನಟಿ ಐಶ್ವರ್ಯಾ ರೈ ಮಗಳನ್ನು ಅತಿಯಾಗಿ ರಕ್ಷಣೆ ಮಾಡುವ ತಾಯಿಯಾಗಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ,ಅವಳು ಮಗಳನ್ನು ಅತಿಯಾಗಿ ರಕ್ಷಿಸುವುದನ್ನು ತಾನು ದೂಷಿಸುವುದಿಲ್ಲ. ಮಾಧ್ಯಮದವರು ಮಗಳನ್ನು ಸುತ್ತುವರಿದರೆ ತನಗೂ ಭಯವಾಗುತ್ತದೆ ಎಂದು ಹೇಳುವುದರ ಮೂಲಕ ಪತ್ನಿಗೆ ಬೆಂಬಲ ನೀಡಿದ್ದಾರೆ.