ಸಿನಿಮಾ

Gurkha Film: ‘ಗೂರ್ಖಾ’ ಚಿತ್ರದ ಪೋಸ್ಟರ್ ನಲ್ಲಿದ್ದ ತಪ್ಪನ್ನು ತಿಳಿಸಿದ ಮಾಜಿ ಗೂರ್ಖಾ ಅಧಿಕಾರಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಗೂರ್ಖಾ’ ದ ಎರಡು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದರು. ಈ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಎಕ್ಸ್ ಆರ್ಮಿ ಅಧಿಕಾರಿಯೊಬ್ಬರು ಅದರಲ್ಲಿ ತಪ್ಪನ್ನು ಕಂಡುಹುಡುಕಿ ಅಕ್ಷಯ್ ಗೆ ತಿಳಿಸಿದ್ದಾರೆ.

ಮಾಜಿ ಗೂರ್ಖಾ ಅಧಿಕಾರಿ ಮೇಜರ್ ಮಾಣಿಕ್ ಎಂ ಜಾಲಿ ಪೋಸ್ಟರ್ ನಲ್ಲಿ ಖುಕ್ರಿಯನ್ನು ತೋರಿಸಿರುವ ರೀತಿ ಸರಿಯಲ್ಲ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಗೆ ಟ್ವೀಟ್ ಮಾಡಿರುವ ಅವರು, ಅಕ್ಷಯ್ ಕುಮಾರ್ ಅವರೇ ಮಾಜಿ ಗೂರ್ಖಾ ಅಧಿಕಾರಿಯಾಗಿ ಚಿತ್ರ ಮಾಡಿದ್ದಕ್ಕೆ ಧನ್ಯವಾದ. ಆದರೂ ವಿವರಗಳು ಮುಖ್ಯ. ದಯವಿಟ್ಟು ಖುಕ್ರಿಯನ್ನು ಸರಿಪಡಿಸಿ, ಅದರ ಇನ್ನೊಂದು ಬದಿಯಲ್ಲಿ ಚೂಪಾದ ಅಂಚಿದೆ, ಅದು ಖಡ್ಗವಲ್ಲ. ಖುಕ್ರಿ ಬ್ರೇಡ್ ಒಳಗಿನಿಂದ ಹೊಡೆಯುತ್ತದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್ ಅವರು, ಈ ತಪ್ಪನ್ನು ಎತ್ತಿ ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಸಿನಿಮಾ ಮಾಡುವಾಗ ನಾವು ಅತ್ಯಂತ ಕಾಳಜಿವಹಿಸುತ್ತೇವೆ. ನಾನು ಗೂರ್ಖಾ ಆಗಿರುವುದಕ್ಕೆ ತುಂಬಾ ಹೆಮ್ಮೆ ಮತ್ತಯ ಗೌರವವಿದೆ. ವಾಸ್ತವಕ್ಕೆ ಹತ್ತಿರ ತರುವ ಯಾವುದೇ ಸಲಹೆಗಳು ಅತ್ಯಂತ ಮೆಚ್ಚುಗೆ ಪಡೆಯುತ್ತದೆ ಎಂದು ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button