ಸಿನಿಮಾ

ಪುನೀತ್ ಅವರಿಗೆ ಹೃದಯಾಘಾತ ಆಗಿರುವುದು ನಂಬಲು‌ ಆಗುತ್ತಿಲ್ಲ: ಮಾಸ್ಟರ್ ಆನಂದ್

ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಹೃದಯಾಘಾತ ಆಗಿರುವ ಸುದ್ಧಿ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ ಆ್ಯಕ್ಟಿವ್ ಆಗಿದ್ದ ನಟರಲ್ಲಿ ಪುನೀತ್ ರಾಜ್‍ಕುಮಾರ ಒಬ್ಬರಾಗಿದ್ದರು. ಅವರ ಒಬ್ಬ ಅಭಿಮಾನಿಯಾಗಿ ನಮ್ಮಗೂ ಈ ವಿಚಾರ ತುಂಬಾ ನೋವನ್ನುಂಟು ಮಾಡಿದೆ ಎಂದು ಚಿತ್ರನಟ ಹಾಗೂ ನಿರೂಪಕ ಮಾಸ್ಟರ್ ಆನಂದ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗ ತಾನೇ ಪ್ರೆಸ್ ಮೀಟ್ ಮುಗಿಸಿಕೊಂಡು ಊಟಕ್ಕೆ ಬಂದಿದ್ದೇವೆ. ಆದರೆ ಸುದ್ಧಿ ತಿಳಿಯುತ್ತಿದ್ದಂತೆ ಊಟ ಮಾಡಿರುವುದು ಜೀರ್ಣವಾಗುತ್ತಿಲ್ಲ. ನಿಜಕ್ಕೂ ಪವರ್ ಸ್ಟಾರ್ ಅವರಿಗೆ ಹೃದಯಾಘಾತ ಆಗಿರುವುದು ಸಾಕಷ್ಟು ನೋವು ತಂದಿದೆ. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಮಾಡುತ್ತೇವೆ.

ಇಂದು ನಮ್ಮ ಪ್ರೇಮಂ ಪೂಜ್ಯಂ ಚಿತ್ರದ ನಾಯಕ ನಟ ಹಾಗೂ ನಟಿ ಸೇರಿದಂತೆ ನಾನು ಎಲ್ಲರೂ ಚಿತ್ರದ ಪ್ರಮೋಶನಗಾಗಿ ಹುಬ್ಬಳ್ಳಿಗೆ ಬಂದಿದ್ವೀ, ಆದರೆ ಈಗ ಪವರ್ ಸ್ಟಾರ್ ಅವರಿಗೆ ಹೃದಯಾಘಾತ ಸುದ್ದಿ ತಿಳಿದು ಎಲ್ಲವನ್ನೂ ರದ್ದುಗೊಳಿಸಿ ನೇರವಾಗಿ ಬೆಂಗಳೂರಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ಅಲ್ಲಿ ಏನಾಗುತ್ತಿದೆ ಎನವುದು ಇಲ್ಲಿಂದ ತಿಳಿದುಕೊಳ್ಳುವುದು ಈ ಸಮುದಲ್ಲಿ ಕಷ್ಟ. ಹಾಗಾಗಿ ನಮ್ಮ ಎಲ್ಲ ಕಾರ್ಯಗಳನ್ನು ರದ್ದುಗೊಳಿಸಿ ಈಗ ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದರು.‌

Related Articles

Leave a Reply

Your email address will not be published.

Back to top button