ಸಿನಿಮಾ

Kriti Kharbanda: ನಟಿ ಕೃತಿ ಕರಬಂದಾ ಫಿಟ್ ನೆಸ್ ಗಾಗಿ ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುತ್ತಾರಂತೆ

ಬಾಲಿವುಡ್ ನಟಿ ಕೃತಿ ಕರಬಂದಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. ಜೊತೆಗೆ ಅವರು ಫಿಟ್ ನೆಸ್ ಮತ್ತು ಸೌಂದರ್ಯಕ್ಕೆ ಹೆಸರು ವಾಸಿಯಾಗಿದ್ದಾರೆ. ಅವರು ಫಿಟ್ ನೆಸ್ ಕಾಯ್ದುಕೊಳ್ಳಲು ಬಹಳ ಶ್ರಮಿಸುತ್ತಾರಂತೆ. ಹಾಗಾದ್ರೆ ಅವರ ಫಿಟ್ ನೆಸ್ ರಹಸ್ಯ ಏನೆಂಬುದನ್ನು ತಿಳಿದುಕೊಳ್ಳಿ.

ಕೃತಿ ಕರಬಂದಾ ಅವರು ಫಿಟ್ ಆಗಿರಲು ಜಿಮ್ ನಲ್ಲಿ ಸಾಕಷ್ಟು ಬೆವರು ಹರಿಸುತ್ತಾರಂತೆ. ಅವರು ಪ್ರತಿದಿನ ತೂಕದ ತರಬೇತಿ, ಜಾಗಿಂಗ್, ನೃತ್ಯ ಮತ್ತು ಯೋಗ ಮಾಡುತ್ತಾರಂತೆ. ನಟಿಉ ವರ್ಕೌಟ್ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇವರು ಆಹಾರದ ಅಭಿಮಾನಿಯಾಗಿದ್ದಾರೆ. ಅವರು ದಿನವನ್ನು ಕೊತ್ತಂಬರಿ ಮತ್ತು ಜೀರಿಗೆ ನೀರಿನಿಂದ ಪ್ರಾರಂಭಿಸುತ್ತಾರಂತೆ. ಬಳಿಕ ಅವರು ಕಪ್ಪು ಕಾಫಿ ಕುಡಿಯುತ್ತಾರಂತೆ. ಹಾಗೇ ಉಪಹಾರದಲ್ಲಿ ಹಣ್ಣುಗಳನ್ನು ಸೇವಿಸುತ್ತಾರಂತೆ. ಇದರ ಹೊರತಾಗಿ ಅವರು ಸಮುದ್ರಾಹಾರವನ್ನು ತುಂಬಾ ಇಷ್ಟಪಡುತ್ತಾರಂತೆ. ಆಗಾಗ ಊಟದಲ್ಲಿ ಮೀನು ಸೇವಿಸುತ್ತಾರಂತೆ. ಹಾಗೇ ಅವರು ಹೈಡ್ರೇಟ್ ಆಗಿರಲು ದಿನವಿಡೀ 8-10 ಗ್ಲಾಸ್ ನೀರು ಕುಡಿಯುತ್ತಾರಂತೆ.

Related Articles

Leave a Reply

Your email address will not be published. Required fields are marked *

Back to top button