ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ “ಅವತಾರ ಪುರುಷನಾಗಿ” ಬರುತ್ತಿದ್ದಾನೆ “ಅಧ್ಯಕ್ಷ”..!

ಕಾಮಿಡಿ ಕಿಂಗ್ ಶರಣ್ ಅವರು ಅಧ್ಯಕ್ಷ, ರ್ಯಾಂಬೋ, ವಿಕ್ಟರಿ ಗೆದ್ದು ಈಗ “ಅವತಾರ ಪುರುಷನಾಗಿ” ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಮೂಲಕ ಪುಷ್ಕರ್ ಫಿಲ್ಮ್ಸ್ ಮತ್ತೊಮ್ಮೆ ಹೊಸ ವಿಭಿನ್ನ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ.

ಶರಣ್ ಸಿನಿಮಾ ಅಂದ್ರೆ ಕಾಮಿಡಿಗೇನು ಕಮ್ಮಿ ಇರಲ್ಲ. ಡಿಫರೆಂಟ್ ಸ್ಟೋರಿ ಬಯಸೋರಿಗೂ ಕೂಡ ನಿರಾಸೆಯಾಗೋದಿಲ್ಲ. ಈ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮೊದಲನೇಯದ್ದಾಗಿ ಈ ಸಿನಿಮಾ ಕೂಡ KGF ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ. KGF ಈಗಾಗಲೇ ಮೊದಲೇ ಭಾಗದಿಂದಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು, 2ನೇ ಭಾಗದ ರಿಲೀಸ್ ಗೂ ಅಷ್ಟೇ ಕಾತರತೆ ಇದೆ.

ಬಾಹುಬಲಿ ಕೂಡ 2 ಭಾಗಗಳಲ್ಲಿ ಬಂದು ಇಡೀ ಬಾರತೀ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಈ ಸ್ಯಾಂಡಲ್ ವುಡ್ ನ ಮತ್ತೊಂದು ಸಿನಿಮಾ ಅದ್ರಲ್ಲೂ ಶರಣ್ ಅಭಿನಯದ ಸಿನಿಮಾ ಅವತಾರ ಪುರುಷ 2 ಬಾಗಗಳಲ್ಲಿ ತೆರೆಮೇಲೆ ಬರುತ್ತಿದೆ. ಶರಣ್ ರಾಜ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್ ನ ಸಿನಿಮಾ ಆಗಿದೆ. ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರಿಗೆ ದರ್ಶನ ಕೊಡಲು “ಅವತಾರ ಪುರುಷ” ಸಜ್ಜಾಗ್ತಿದ್ದಾನೆ.

ಸಿನಿಮಾವನ್ನ ಭರ್ಜರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ ಸಿನಿಮಾ ತಂಡ. ನವೆಂಬರ್ ನ ಅಂತ್ಯದಲ್ಲಿ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲೇ ಅಂದ್ರೆ ದೀಪಾವಳಿಗೂ ಮೊದಲೇ ಸಿನಿಮಾ ತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರರಟಿದೆ. ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ.
ಆಶಿಕಾ ರಂಗನಾಥ್ ಹಾಗೂ ಶರಣ್ ಜೋಡಿಯಾಗಿರುವ ಈ ಸಿನಿಮಾದ ಪೋಸ್ಟರ್ ಗಳು ಟೀಸರ್ ಗಳು ಸಖತ್ ಕ್ಯೂರಿಯಾಸಿಟಿ ಹುಟ್ಟುಹಾಕಿವೆ. ಅಲ್ಲದೇ ಅಭಿಮಾನಿಗಳ ಕಾತರತೆಯನ್ನೂ ಹೆಚ್ಚಿಸಿವೆ. ಸಿನಿಮಾದ ಪ್ಲಾಟ್ ಹೇಗಿರಲಿದೆ ಎಂಬ ಸಾಕಷ್ಟು ಕ್ಯೂರಿಯಾಸಿಟಿ ಮೂಡಿದೆ. ಜೊತೆಗೆ ವಿಭಿನ್ನ ಟೈಟಲ್ ಹಾಗೂ ಟ್ಯಾಗ್ ಲೈನ್ ಕುತೂಹಲವನ್ನ ದುಪ್ಪಟ್ಟಾಗಿಸಿದೆ.
ಸಿನಿಮಾ ಹಾರರ್ ಕಾಮಿಡಿ ಎಲಿಮೆಂಟ್ ಹೊಂದಿದ್ದು, ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣವಿರಲಿದೆ. ಅದ್ರಲ್ಲಿ ಯಾವುದೇ ಅನುಮಾನವಿಲ್ಲ. ಒಟ್ಟಾರೆಯಾಗಿ ಸಿನಿಪ್ರಿಯರಿಗೆ “ಅವತಾರ

ಪುರುಷ” ಸಖತ್ ಎಂಟರ್ ಟೈನ್ ಮಾಡೋದ್ರಲ್ಲಿ ಡೌಟೇ ಇಲ್ಲ:

ಡಿಫರೆಂಟ್ ಕಥೆ, ಸ್ಕ್ರೀನ್ ಪ್ಲೇ ಗಳ ಮೂಲಕವೇ ಜನರ ಮನ ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ “ಅವತಾರ ಪುರುಷ” ನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಕಾಮಿಡಿ ಕಿಂಗ್ ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಇನ್ನೂ ದೊಡ್ಡ ತಾರಾಬಳಗವೇ ಇದೆ.

Related Articles

Leave a Reply

Your email address will not be published.

Back to top button