ಸಿನಿಮಾ

Ranveer Singh: ಇವರಂತೆ ಕಾಣುವ ಮಗಳನ್ನು ಬಯಸಿದ ನಟ ರಣವೀರ್ ಸಿಂಗ್

ಬಾಲಿವುಡ್ ನ ತಾರಾ ಜೋಡಿಗಳಲ್ಲಿ ದೀಪಿಕಾ-ರಣವೀರ್ ಜೋಡಿ ಕೂಡ ಒಂದು. ಇವರು ನವೆಂಬರ್ 2018 ರಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಯಾಗಿ ಮೂರು ವರ್ಷವಾದರೂ ಇನ್ನೂ ಸಿಹಿಸುದ್ದಿ ನೀಡಲಿಲ್ಲ. ಆದರೆ ಇದೀಗ ರಣವೀರ್ ಸಿಂಗ್ ಅವರು ಮಗಳನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಟಿವಿ ಶೋ ವೊಂದರ ಪ್ರಚಾರದ ವಿಡಿಯೋದಲ್ಲಿ ನಟ ರಣವೀರ್ ಸಿಂಗ್ ತಂದೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮುಂಬರುವ 2-3 ವರ್ಷಗಳಲ್ಲೇ ತಾನು ತಂದೆಯಾಗಲಿದ್ದೇನೆ. ಹಾಗೇ ದೀಪಿಕಾರಂತೆ ಕಾಣುವ ಮಗಳನ್ನು ಹೊಂದಲು ಬಯಸುತ್ತೇನೆ. ಅದಕ್ಕಾಗಿ ತಮ್ಮ ಭವಿಷ್ಯದ ಮಗುವಿನ ಹೆಸರನ್ನು ಈಗಾಗಲೇ ಅಂತಿಮಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರಸ್ತುತ ರಣವೀರ್ ಸಿಂಗ್ ಅವರು ಕರಣ್ ಜೋಹರ್ ಅವರ ಮುಂದಿನ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Related Articles

Leave a Reply

Your email address will not be published.

Back to top button