ಗೋಕರ್ಣ: ಮಹಾಬಲೇಶ್ವರ ದೇವಾಲಯಕ್ಕೆ ನಟ ಪ್ರೇಮ್ ಭೇಟಿ
ಕಾರವಾರ : ನಟ ಮತ್ತು ನಿರ್ದೇಶಕ ಪ್ರೇಮ್ ಅವರು ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ಮಹಾಗಣಪತಿ,ತಾಮ್ರ ಗೌರಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಎಲ್ಲಾ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದೆನು.ಆದರೆ ಇಲ್ಲಿ ಮಾತ್ರ ಬರಲಾಗಲಿಲ್ಲ. ಇದೇ ಮೊದಲ ಬಾರಿ ಶ್ರೀಕ್ಷೇತ್ರಕ್ಕೆ ಬಂದಿದ್ದು,ದೇವರ ದರ್ಶನ ಸಂತಸ ತಂದಿದೆ ಎಂದರು.ಇಲ್ಲಿನ ಸಂಪ್ರದಾಯ,ಆಚಾರ ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನೊಮ್ಮೆ ಪತ್ನಿ ನಟಿ ರಕ್ಷಿತಾರವರನ್ನು ಗೋಕರ್ಣಕ್ಕೆ ಕರೆದುಕೊಂಡು ಬರುವುದಾಗಿ ಅವರು ತಿಳಿಸಿದರು.
ಈ ಭಾಗದ ಜನರು ಚಲನಚಿತ್ರ ನೋಡಿ ಪ್ರೋತ್ಸಾಹಿಸುತ್ತಿದ್ದು,ಇದೇ ರೀತಿ ಜನರ ಪ್ರೋತ್ಸಾಹ ಮುಂದುವರಿಯಲಿ ಎಂದು ಆಶಿಸಿದರು.ಮಹಾಬಲೇಶ್ವರ ದೇವಾಲಯದಲ್ಲಿರುವ ಧವಳಿಗಿರಿ ಎಂಬ ನಂದಿಯನ್ನು ವೀಕ್ಷಿಸಿ,ನಂದಿ ಮೈ ಸವರಿ ಬಾಳೆಹಣ್ಣು ನೀಡಿ ಕೆಲಕಾಲ ಕಳೆದು ಖುಷಿಪಟ್ಟರು.ಅಲ್ಲದೆ ತಮ್ಮ ಊರು ಮಂಡ್ಯ ಜಿಲ್ಲೆಯ ಮದ್ದೂರು ತೋಟದ ಮನೆಯಲ್ಲಿರುವ ಹಸುಗಳು ಮತ್ತು ವಿವಿಧ ತಳಿಯ ಜಾನುವಾರುಗಳನ್ನು ಸಾಕಿದ ಬಗ್ಗೆ ಹೇಳಿಕೊಂಡು ಸಂತಸ ಪಟ್ಟರು.