ಸಿನಿಮಾ

Actor Ajith: ನಟ ಅಜಿತ್ ಮನೆಯ ಮುಂದೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನ

ಕಾಲಿವುಡ್ ನಟ ಅಜಿತ್ ಅವರ ಮನೆಯ ಮುಂದೆ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ನಡೆದಿದ್ದು, ಈ ದುರ್ಘಟನೆಯನ್ನು ಜನರು ತಡೆದು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸ್ ಬಂದು ಮಹಿಳೆಯನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಫರ್ಜಾನಾ ಎಂಬ ಒಬ್ಬ ನರ್ಸ್ ಆಗಿದ್ದು, ಕಳೆದ ವರ್ಷ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಜಿತ್ ಮತ್ತು ಶಾಲಿಸಿ ಅವರ ವಿಡಿಯೋಗಳನ್ನು ಕ್ಲಿಕ್ಕಿಸಿದ್ದಕ್ಕಾಗಿ ಅವರನ್ನು ವಜಾಗೊಳಿಸಲಾಗಿತ್ತು. ಈ ಹಿಂದೆ ಆಕೆ ಅಜಿತ್ ನಿಂದ ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದಳು. ತನ್ನ ಕೆಲಸವನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ.

ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಕಾರಣ ಆಕೆಯ ಆಸ್ಪತ್ರೆಯ ನಿರ್ವಹಣೆಯೊಂದಿಗೆ ಬೇರೆ ಕೆಲವು ಸಮಸ್ಯೆಗಳಿವೆ. ಇದಲ್ಲದೇ ನಟನನ್ನು ವೈಯಕ್ತಿಕವಾಗಿ ಭೇಟಿಯಾಗಲು ಅಜಿತ್ ಗೆ ಕಳುಹಿಸಿದ ಇಮೇಲ್ ನಿಂದಾಗಿ ತಾನು ಕೆಲಸ ಕಳೆದುಕೊಂಡೆ ಎಂದು ಆಕೆ ಆರೋಪಿಸಿದ್ದಾಳೆ.

Related Articles

Leave a Reply

Your email address will not be published.

Back to top button