Breaking NewsLatest

ಅಮಾನತು ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ: ಯೋಗೇಂದ್ರ ಯಾದವ್

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾದಿಂದ ಅಮಾನತುಗೊಂಡಿರುವ ಯೋಗೇಂದ್ರ ಯಾದವ್ ತಾವು ಮೋರ್ಚಾದ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿರುವುದಲ್ಲದೆ, ಅಮಾನತು ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಎಸ್ ಕೆ ಎಂ ನಿಂದ ಒಂದು ತಿಂಗಳ ಅಮಾನತುಗೊಂಡ ಬಳಿಕ ಅವರು ಪ್ರತಿಕ್ರಿಯಿಸಿ, ದೀರ್ಘಾವಧಿಯ ರೈತ ಹೋರಾಟದ ಯಶಸ್ಸಿಗೆ ಹಿಂದಿಗಿಂತಲೂ ಹೆಚ್ಚಿನ ಶ್ರಮವಹಿಸುವ ನಿರ್ಧಾರ ಕೈಗೊಂಡಿದ್ದೇನೆ. ಲಖೀಂಪುರ ಘಟನೆಯಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಕುಟುಂಬಸ್ಥರಲ್ಲಿಗೆ ಮಾನವೀಯ ಕಳಕಳಿಯಿಂದ ಹೋಗಿದ್ದೆ. ನಮ್ಮ ಭಾವನೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಿಂದ ಹೋರಾಟದ ಹಾದಿ ಬಲಗೊಳ್ಳುತ್ತದೆಯೇ ಹೊರತು ದುರ್ಬಲಗೊಳ್ಳುವುದಿಲ್ಲ ಎಂದು ತಾನು ನಂಬಿರುವುದಾಗಿ ತಿಳಿಸಿರುವ ಅವರು, ಮೋರ್ಚಾದೊಂದಿಗೆ ಸಮಾಲೋಚನೆ ಮಾಡದೆ ಮೃತ ಬಿಜೆಪಿ ಕಾರ್ಯಕರ್ತರ ಕುಟುಂಬಸ್ಥರ ಬಳಿಗೆ ಹೋಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ರೈತರ ಮೇಲೆ ವಾಹನ ಹರಿಸಿದ ನಂತರ ನಡೆದ ಹಿಂಸಾಚಾರದಲ್ಲಿ ವಿರೋಧಿಗಳಾಗಿ ಕಾಣಿಸಿಕೊಂಡವರ ಪರವಾಗಿ ಯೋಗೇಂದ್ರ ಯಾದವ್ ನಿಂತಿದ್ದ ಆರೋಪದಿಂದಾಗಿ ಅವರ ವಜಾಕ್ಕೆ ಹೆಚ್ಚಿನ ಆಗ್ರಹ ಕೇಳಿಬಂದಿತ್ತು,

Related Articles

Leave a Reply

Your email address will not be published. Required fields are marked *

Back to top button