Breaking News

ಬಾಂಗ್ಲಾ ವಿರುದ್ಧ ಆಸೀಸ್​ಗೆ ಸುಲಭ ಜಯ

ದುಬೈ: ಈಗಾಗಲೇ ವಿಶ್ವಕಪ್ ನಿಂದ ನಿರ್ಗಮಿಸಿರುವ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ತಂಡ 8 ವಿಕೆಟ್ ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಆ್ಯಡಂ ಜಾಂಪಾ ( 19ಕ್ಕೆ 5) ಅವರ ಬೌಲಿಂಗ್ ನೆರವಿನಿಂದ ಬಾಂಗ್ಲಾದೇಶ ವನ್ನು ಕೇವಲ‌ 73 ರನ್ ಗೆ ಕಟ್ಟಿಹಾಕಿತು. ಬಾಂಗ್ಲಾ ಟೈಗರ್ಸ್ ಇನ್ನೂ 5 ಓವರ್ ಬಾಕಿ ಇರುವಾಗಲೇ ಸರ್ವ ಪತನ ಕಂಡಿತು.

74 ರನ್ ಸುಲಭ ಜಯದ ಗುರಿ ಹೊತ್ತ ಆಸ್ಟ್ರೇಲಿಯಾ 6.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಯಶ ಕಂಡಿತು. ನಿರೀಕ್ಷೆಯಂತೆ ಜಾಂಪಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಈ ಜಯದೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು.

Related Articles

Leave a Reply

Your email address will not be published.

Back to top button