Breaking NewsLatest
ಪೊಲೀಸ್ ಠಾಣೆಗೆ ರಾತ್ರಿವೇಳೆ ಮಹಿಳೆಯರು ಒಂಟಿಯಾಗಿ ಹೋಗಬೇಡಿ ಎಂದು ಬಿಜೆಪಿ ನಾಯಕಿ ಸಲಹೆ
ಲಕ್ನೋ: ಪೊಲೀಸ್ ಠಾಣೆಗೆ ರಾತ್ರಿವೇಳೆ ಮಹಿಳೆಯರು ಒಂಟಿಯಾಗಿ ಹೋಗಬಾರದು ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಸಲಹೆ ನೀಡಿದ್ದಾರೆ.
ವಾರಾಣಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಇಂತಹ ಸಲಹೆ ನೀಡಿದ್ದು, ಉತ್ತರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಇರುತ್ತಾರಾದರೂ ಸಂಜೆ ನಂತರ ಮಹಿಳೆಯರು ಅಲ್ಲಿಗೆ ಹೋಗದಿರುವುದೇ ಒಳ್ಳೆಯದು. ಹೋಗಲೇಬೇಕಿದ್ದರೆ ಒಂಟಿಯಾಗಿ ಹೋಗಬೇಡಿ. ಸಹೋದರರು, ತಂದೆ, ಪತಿ ಅಥವಾ ಕುಟುಂಬಸ್ಥರನ್ನು ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದು, ಈ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗಿದೆ.