Breaking NewsLatest

ಕೋವ್ಯಾಕ್ಸಿನ್ ತುರ್ತು ಬಳಕೆ ಅಂಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದೆ.

ಬುಧವಾರ ಈ ಸಂಬಂಧ ನಡೆದ ತಾಂತ್ರಿಕ ಪರಿಣಿತರ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಹೊರಬಿದ್ದಿದೆ. ಇದರೊಂದಿಗೆ ತುರ್ತು ಬಳಕೆ ಯಾದಿಯಲ್ಲಿ ಕೋವ್ಯಾಕ್ಸಿನ್ ಸೇರಿದ್ದು, ಭಾರತದಲ್ಲಿ ಉತ್ಪಾದಿತ ಕೋವಾಕ್ಸಿನ್‌ ಲಸಿಕೆಗೆ ಇತರ ದೇಶಗಳಲ್ಲಿ ಮಾನ್ಯತೆ ದೊರೆತಂತಾಗಿದೆ. ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ಕ್ವಾರಂಟೈನ್​ನಲ್ಲಿರುವ ಅಗತ್ಯವಿರುವುದಿಲ್ಲ. ವಿದೇಶಕ್ಕೆ ಪ್ರಯಾಣಿಸುವಾಗ ನಿರ್ಬಂಧಗಳನ್ನು ಎದುರಿಸಬೇಕಾಗಿಲ್ಲ.

ಕಳೆದ ವಾರ ನಡೆದ ಪರಿಣಿತರ ಸಭೆ, ತುರ್ತು ಳಕೆ ಯಾದಿಯಲ್ಲಿ ಕೋವ್ಯಾಕ್ಷಿನ್ ಸೇರ್ಪಡೆಗೆ ಹೆಚ್ಚುವರಿ ಸ್ಪಷ್ನೆಯನ್ನು ಕೋವ್ಯಾಕ್ಸಿನ್ ತಯಾರಿಕಾ ಸಂಸ್ಥೆಯಾದ ಭಾರತ್ ಬಯೋಟೆಕ್​ನಿಂದ ಕೇಳಿತ್ತು. ಅದಾದ ಬಳಿಕ ಇಂದು ನಡೆದ ಸಭೆಯಲ್ಲಿ ತುರ್ತು ಬಳಕೆ ಕುರಿತ ಸಮ್ಮತಿ ಪ್ರಕಟವಾಗಿದೆ.

Related Articles

Leave a Reply

Your email address will not be published. Required fields are marked *

Back to top button