Breaking NewsLatest

WhatsApp down: ಸ್ಥಗಿತಗೊಂಡಿದ್ದ ಫೇಸ್​ಬುಕ್​​, ವಾಟ್ಸಪ್ ಮತ್ತೆ ಸಕ್ರಿಯ

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​​, ವಾಟ್ಸಪ್, ಇನ್ಸ್ಟ್ರಾಗ್ರಾಂ ಸೇವೆ ಸೋಮವಾರ ರಾತ್ರಿ ಸುಮಾರು 9 ಗಂಟೆ ನಂತರ ರಾತ್ರಿವೇಳೆ ಸುಮಾರು 6 ತಾಸು ಕಾಲ ಸ್ಥಗಿತಗೊಂಡು ಮುಂಜಾನೆ ಹೊತ್ತಿಗೆ ಸಕ್ರಿಯಗೊಂಡಿವೆ.

ಇದ್ದಕ್ಕಿದ್ದಂತೆ ಕೈಕೊಟ್ಟಿದ್ದ ಈ ಸಾಮಾಜಿಕ ಜಾಲತಾಣಗಳಿಂದ ಕೋಟ್ಯಂತರ ಬಳಕೆದಾರರು ಸಮಸ್ಯೆ ಅನುಭವಿಸಿದ್ದಾರೆ. ಇದಕ್ಕೆ ವಾಟ್ಸಪ್ ಸಿಇಒ ವಿಲ್ ಕ್ಯಾಥ್ಕರ್ಟ್ ವಿಷಾಧ ವ್ಯಕ್ತಪಡಿಸಿದ್ದಾರೆ. ದಿಢೀರ್ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ಮತ್ತೆ ಸಕ್ರಿಯಗೊಳ್ಳಲು ಶ್ರಮಿಸಿರುವ ತಂತ್ರಜ್ಞರಿಗೆ ಸಿಇಒ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂರು ಜಾಲತಾಣಗಳ ಸಮೂಹ ಸಿಇಒ ಮಾರ್ಕ್ ಝಕೆರ್ಬರ್ಗ್ ಬಳಕೆದಾರರ ಕ್ಷಮೆ ಕೋರಿ ಫೇಸ್​ಬುಕ್​​ ನಲ್ಲಿ ಪೋಸ್ಟ್ ಮಾಡಿದ್ದಾರೆ.

Related Articles

Leave a Reply

Your email address will not be published.

Back to top button