Breaking NewsLatest
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವರುಣ್, ಮನೇಕಾ ಹೊರಕ್ಕೆ
ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಕೊಲೆ ಘಟನೆ ಸಂಬಂಧ ಐದು ದಿನಗಳಾದರೂ ಆರೋಪಿಗಳನ್ನು ಬಂಧಿಸದ ಬಿಜೆಪಿ, ರೈತರ ಪರವಾಗಿ ಮಾತನಾಡಿದ ವರುಣ್ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಂಡಿಲ್ಲ.
ಬಿಜೆಪಿ ಕಾರ್ಯಕಾರಿಣಿ ಹೊಸ ಪಟ್ಟಿಯಿಂದ ವರುಣ್ ಗಾಂಧಿ, ಅವರ ತಾಯಿ ಮನೇಕ ಗಾಂಧಿ ಹೆಸರು ಕೈಬಿಡಲಾಗಿದೆ. ಇದೊಂದು ಮಾಮೂಲಿ ಪ್ರಕ್ರಿಯೆ ಎಂದು ಇದರ ಬಗ್ಗೆ ಬಿಜೆಪಿ ಹೇಳಿದೆ.
ಲಖೀಂಪುರ ಖೇರಿ ಘಟನೆ ಸಂಬಂಧ ಉಗ್ರ ಟೀಕೆ ಮಾಡಿದ್ದ ವರುಣ್ ಗಾಂಧಿ, ಸೋಮವಾರವೇ ತಮ್ಮ ಟ್ವಿಟರ್ ಹ್ಯಾಂಡಲ್ನಿಂದ ಬಿಜೆಪಿ ಎಂಬುದನ್ನು ತೆಗೆದಿದ್ದರು. ಅವರು ಬಿಜೆಪಿ ಬಿಡಲಿದ್ದಾರೆ ಎಂಬ ವದಂತಿಯೂ ಹಬ್ಬಿದೆ.