Breaking NewsLatest
ರಾಜಕಾರಣ ಎಂದರೆ ಕಾರು ಹರಿಸಿ ಕೊಲ್ಲುವುದಲ್ಲ: ಯುಪಿ ಬಿಜೆಪಿ ಅಧ್ಯಕ್ಷ
ಲಕ್ನೋ: ರಾಜಕೀಯ ನಾಯಕ ಎಂದರೆ ಯಾರ ಮೇಲಾದರೂ ಫಾರ್ಚುನರ್ ಕಾರು ಹಾಯಿಸಿ ಕೊಲ್ಲುವುದಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಲಖೀಂಪುರ ಖೇರಿಯಲ್ಲಿ ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿ ಹತ್ಯೆಗೈದನೆನ್ನಲಾದ ಆರೋಪವಿರುವ ಹೊತ್ತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿರುವ ಈ ಮಾತು ರಾಜಕೀಯ ಮಹತ್ವ ಪಡೆದಿದೆ.
ಪಕ್ಷದ ಅಲ್ಪಸಂಖ್ಯಾತ ಘಟಕದ ಕಾರ್ಯಕಾರಿಣಿಯ ಉದ್ಘಾಟನೆ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಒಬ್ಬನ ವರ್ತನೆಯ ಮೇಲೆ ಚುನಾವಣೆಯ ಗೆಲುವು ಅವಲಂಬಿಸಿರುತ್ತದೆ. ರಾಜಕಾರಣ ಇರುವುದು ಸಮಾಜ ಮತ್ತು ದೇಶದ ಸೇವೆಗಾಗಿ. ಅಲ್ಲಿ ಜಾತಿ ಮತ್ತು ಧರ್ಮ ಬರುವುದಿಲ್ಲ.ರಾಜಕೀಯ ನಾಯಕ ಎಂದರೆ ಲೂಟಿಗೈಯುವುದಲ್ಲ. ಫಾರ್ಚುನರ್ ಕಾರು ಹರಿಸಿ ಯಾರನ್ನಾದರೂ ಕೊಲ್ಲುವುದಲ್ಲ. ನಾವು ಬಡವರ ಸೇವೆಗಾಗಿ ಈ ಪಕ್ಷದಲ್ಲಿದ್ದೇವೆ. ರಾಜಕಾರಣ ಪಾರ್ಟ್ ಟೈಂ ನೌಕರಿಯಲ್ಲ ಎಂದು ಅವರು ಹೇಳಿದ್ದಾರೆ.