Breaking NewsLatest
ನವಾಬ್ ಮಲಿಕ್ಗೆ ಭೂಗತ ಲೋಕದ ನಂಟು; ದೀಪಾವಳಿ ಬಳಿಕ ಸಾಕ್ಷ್ಯ ಕೊಡುವೆ ಎಂದ ದೇವೇಂದ್ರ ಫಡ್ನವೀಸ್
ಮುಂಬೈ: ಎನ್ಸಿಪಿ ನಾಯಕ ನವಾಬ್ ಮಲಿಕ್ ಭೂಗತ ಲೋಕದೊಡನೆ ಸಂಬಂಧ ಹೊಂದಿದ್ದಾರೆಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಇದಕ್ಕೆ ದೀಪಾವಳಿ ಬಳಿಕ ಪುರಾವೆ ನೀಡುವುದಾಗಿಯೂ ಅವರು ಸೋಮವಾರ ಹೇಳಿದ್ದಾರೆ. ಭುಗತ ಲೋಕದೊಂದಿಗೆ ಸಂಬಂಧವುಳ್ಳವರು ನನ್ನ ಬಗ್ಗೆ ಮಾತನಾಡಬೇಕಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಜಯದೀಪ್ ರಾಣಾ ಎಂಬ, ಈಗ ಜೈಲಿನಲ್ಲಿರುವ ಡ್ರಗ್ ಪೆಡ್ಲರ್ ಜೊತೆ ಫಡ್ನವೀಸ್ ಸಮಬಮಧ ಹೊಂದಿದ್ದಾರೆಂದು ನವಾಬ್ ಮಲಿಕ್ ಆರೋಪಿಸಿದ್ದಕ್ಕೆ ಪ್ರತಿಯಾಗಿ ಅವರು ಈ ಆರೋಪ ಮಾಡಿದ್ದಾರೆ.
ಜಯದೀಪ್ ರಾಣಾ ಜೊತೆಗೆ ಫಡ್ನವೀಸ್ ಇರುವ ಚಿತ್ರವೊಂದನ್ನೂ ನವಾಬ್ ಮಲಿಕ್ ಟ್ವೀಟ್ ಮಾಡಿದ್ದರು.
ತಮ್ಮ ಅಳಿಯನ ವಿರುದ್ಧ ಆರೋಪಪಟ್ಟಿಯನ್ನು ದುರ್ಬಲಗೊಳಸಿಉವ ಉದ್ದೇಶದಿಮದಲೇ ನವಾಬ್ಮಲಿಕ್ ಎನ್ಸಿಬಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದೂ ಫಡ್ನವೀಸ್ ಅವರು ಸಮೀರ್ ವಾಂಖೆಡೆ ವಿರುದ್ಧದ ಸತತ ಆರೋಪಗಳ ವಿಚಾರವಾಗಿ ಪ್ರತಿಕ್ರಿಯಿಸಿದರು.