Breaking NewsLatest

ಮುಂಬೈನಲ್ಲಿ ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು; ಅಜಿತ್ ಪವಾರ್​ಗೆ ಸೇರಿದ್ದೆಂಬ ಆರೋಪ

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್​ಗೆಸೇರಿದ್ದೆನ್ನಲಾದ 1000 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಪವಾರ್​ಗೆ ಸೇರಿದ್ದೆಂದುಕೊಳ್ಳಲಾಗಿರುವ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ನಾರಿಮನ್ ಪಾಯಿಂಟ್​ನಲ್ಲಿರುವ ನಿರ್ಮಲ್ ಟವರ್ ಸೇರಿದಂತೆ ಐದು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಂದು ಸಕ್ಕರೆ ಕಾರ್ಖಾನೆ, ಒಂದು ರೆಸಾರ್ಟ್ ಕೂಡ ವಿಉಗಳಲ್ಲಿ ಸೇರಿದೆ.

ಅಜಿತ್ ಪವಾರ್ ಮತ್ತವರ ಕುಟುಂಬದವರು ಈ ಆಸ್ತಿಗಳ ಫಲಾನುಭವಿಗಳಾಗಿದ್ದಾರೆಂದು ಐಟಿ ಇಲಾಖೆ ಮೂಲಗಳು ಹೇಳಿವೆ.

ಕಳೆದ ತಿಂಗಳು ಅಜಿತ್ ಪವಾರ್ ಮನೆ ಮತ್ತು ಅವರ ಒಡೆತನದ ಉದ್ದಿಮೆಗಳ ಮೇಲೆ ದಾಳಿ ಮಾಡಿದ್ದ ಐಟಿ ಇಲಾಖೆ, ಶೋಧ ನಡೆಸಿತ್ತು. ತಾವು ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವುದಾಗಿ ಈ ಸಂದರ್ಭದಲ್ಲಿ ಪವಾರ್ ಹೇಳಿದ್ದರು.

ತನಿಖಾ ಸಂಸ್ಥೆಗಳ ದುರ್ಬಳಕೆ ನಡೆಯುತ್ತಿರುವ ಬಗ್ಗೆಯೂ ಅವರು ಆರೋಪಿಸಿದ್ದರು. 35-40 ವರ್ಷಗಳ ಹಿಂದೆ ಮದುವೆಯಾಗಿರುವ ನನ್ನ ಸೋದರಿಯರ ಮನೆಗಳ ಮೇಲೆಯೂ ಅವರು ನನ್ನ ಸಂಬಂಧಿಗಳೆಂಬ ಕಾರಣಕ್ಕೆ ದಾಳಿ ನಡೆಸಲಾಗಿದೆ. ಜನತೆ ಈ ಬಗ್ಗೆ ಯೋಚಿಸಬೇಕು. ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಎಂದು ಅಜಿತ್ ಪವಾರ್ ಟೀಕಿಸಿದ್ದರು.

ಶರದ್ ಪವಾರ್ ಕೂಡ ದಾಳಿಯನ್ನು ಕಟುವಾಗಿ ಖಂಡಿಸಿದ್ದರು. ಇದು ಅಧಿಕಾರದ ದುರ್ಬಳಕೆ ಎಂದು ಅವರು ಆರೋಪಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button