Breaking NewsLatestಸಿನಿಮಾ
ಚಿರಂಜೀವಿ ಸೇರಿದಂತೆ, ಪುನೀತ್ಗೆ ಅಂತಿಮ ಗೌರವ ಸಲ್ಲಿಸಿದ ತೆಲುಗು, ತಮಿಳು ನಟರ ದಂಡು
ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರದ ದರ್ಶನವನ್ನು ತೆಲುಗು ಮತ್ತು ತಮಿಳು ಚಿತ್ರರಂಗದ ಹಲವಾರು ನಟರು ಪಡೆದರು.
ಬೆಳಗ್ಗೆ ನಂದಮೂರಿ ಬಾಲಕೃಷ್ಣ, ಜ್ಯೂ.ಎನ್ಟಿಆರ್, ರಾಣಾ ದಗ್ಗುಬಾಟಿ ಬಂದು ಪುನೀತ್ಗೆ ಅಂತಿಮ ಗೌರವ ಸಲ್ಲಿಸಿದ್ದರು.
ಸಾಯಂಕಾಲ ಮೆಘಾಸ್ಟಾರ್ ಚಿರಂಜೀವಿ, ನಟ ವೆಂಕಟೇಶ್ ಮತ್ತಿತರರು ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆದರು. ಶ್ರೀಕಾಂತ್, ಹಾಸ್ಯನಟ ಆಲಿ ಕೂಡ ಪುನೀತ್ ಅಂತಿಮ ದರ್ಶನ ಪಡೆದರು.
ಹಲವು ತಿಳು ನಟರು ಕೂಡ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.