Breaking NewsLatest

ಅಫ್ಘಾನಿಸ್ತಾನ ಗೆದ್ದರೆ ಮಾತ್ರ ಭಾರತಕ್ಕೆ ಚಾನ್ಸ್

ದುಬೈ: ಸ್ಕಾಟ್ಲೆಂಡ್‌ ವಿರುದ್ಧ ಭಾರತ 8 ವಿಕೆಟ್ ಅಂತರದಲ್ಲಿ ಜಯ ಗಳಿಸುವ ಮೂಲಕ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲಪುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಆದರೆ ನಾಳೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅಫಘಾನಿಸ್ತಾನದ ವಿರುದ್ಧ ಕೇವಲ ಜಯ ಗಳಿಸಿದರೂ ಭಾರತ ಮನೆ ಸೇರಲಿದೆ. ಒಂದು ವೇಳೆ ಅಫಘಾನಿಸ್ತಾನ ಗೆದ್ದು ಭಾರತವವೂ ನಮೀಬಿಯಾ ವಿರುದ್ದ ಬೃಹತ್ ಅಂತರದಲ್ಲಿ ಜಯ ಗಳಿಸಿದರೆ ರನ್ ಸರಾಸರಿಯ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಇಲ್ಲಿ ಅದೃಷ್ಟವೂ ಪ್ರಮುಖ ಪಾತ್ರವಹಿಸಲಿದೆ.

ಶುಕ್ರವಾರ ರಾತ್ರಿ ಸ್ಕಾಟ್ಲೆಂಡ್ ತಂಡವನ್ನು ಭಾರತ ಕೇವಲ‌ 85 ರನ್ ಗೆ ಕಡಿವಾಣ ಹಾಕಿ, ಆ ಮೊತ್ತವನ್ನು ಕೇವಲ 6.3 ಓವರ್ ಗಳಲ್ಲಿ ಗುರಿ ತಲುಪಿತು. ಈ ಜಯದಿಂದಾಗಿ ಭಾರತದ ರನ್ ಸರಾಸರಿ 1.619ಗೆ ತಲುಪಿತು. ‌ಕಿವೀಸ್ ಮತ್ತು ಅಫಘಾನಿಸ್ತಾನ ದ ರನ್ ಸರಾಸರಿಗಿಂತ ಮೇಲುಗೈ ಸಾಧಿಸಿತು.‌

ಆದ್ದರಿಂದ ನಾಳೆಯ ಪಂದ್ಯದಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಅಫಘಾನಿಸ್ತಾನದ ಜಯವನ್ನೇ ಹಾರೈಸುವುದು ಸಹಜ.

ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 6 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ರನ್ ಸರಾಸರಿ 1.277. ಇನ್ನೊಂದು ಜಯ ತಂಡವನ್ನು ಯಾವುದೇ ತೊಂದರೆ ಇಲ್ಲದೆ ಸೆಮಿಫೈನಲ್ ಗೆ ಕೊಂಡೊಯ್ಯಲಿದೆ. ಅಫಘಾನಿಸ್ತಾನ 4 ಅಂಕ ಗಳಿಸಿದ್ದು ರನ್ ಸರಾಸರಿಯಲ್ಲಿ 1.481 ಇದ್ದು ನಾಳೆ ಕಿವೀಸ್ ವಿರುದ್ಧ ಗೆದ್ದರೆ ಈ ಫಲಿತಾಂಶ ಭಾರತಕ್ಕೆ ಲಾಭವಾಗಲಿದೆ. ಏಕೆಂದರೆ ಭಾರತದ ರನ್ ಸರಾಸರಿ ಹೆಚ್ಚಿದ್ದು, ನಮೀಬಿಯಾ ವಿರುದ್ಧ ಜಯ ಗಳಿಸಿದರೆ ರನ್ ಸರಾಸರಿಯ ಆಧಾರದ ಮೇಲೆ ಮುನ್ನಡೆಯಲಿದೆ. ಆದರೆ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೂ ಈ ಎಲ್ಲ ಲೆಕ್ಕಚಾರ ಗೊತ್ತಿದ್ದು, ಅದು ಗೆದ್ದರೆ ಭಾರತಕ್ಕೆ ನಮೀಬಿಯಾ ವಿರುದ್ಧದ ಪಂದ್ಯ ಔಪಚಾರಿಕ ಪಂದ್ಯವಾಗಲಿದೆ.

Related Articles

Leave a Reply

Your email address will not be published.

Back to top button