Breaking NewsLatestಇತರ ಕ್ರೀಡೆ
ರಾಷ್ಟ್ರೀಯ ಈಜು: 7 ವರ್ಷಗಳ ಹಿಂದಿನ ದಾಖಲೆ ಮುರಿದ ರಿಧಿಮಾ
ಬೆಂಗಳೂರು: ಇಲ್ಲಿನ ಬಸವನಗುಡಿ ಅಕ್ವೆಟಿಕ್ ಸೆಂಟರ್ ನಲ್ಲಿ ನಡೆಯುತ್ತಿರುವ 47ನೇ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ರಾಧಿಮಾ ವೀರೇಂದ್ರ ಕುಮಾರ್ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ ಗೆದ್ದಿರುವುದು ಮಾತ್ರವಲ್ಲ ಏಳು ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
2014ರಲ್ಲಿ ಮಾನಾ ಪಟೇಲ್ ದಾಖಲೆ ಬರೆದಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ ನ ಎರಡನೇ ದಿನದಲ್ಲಿ ರಿಧಿಮಾ 1:4.87 ಸೆಕೆಂಡುಗಳಲ್ಲಿ ಗುರಿ ತಲುಪಿ ಗುಜರಾತಿನ ಒಲಿಂಪಿಯನ್ ಮಾನಾ ಪಟೇಲ್ ಅವರ ದಾಖಲೆ ಮುರಿದರು. ಮಾನಾ ಪಟೇಲ್ 2014 ರಲ್ಲಿ 1:5.30 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.
ಕರ್ನಾಟಕದ ಇನ್ನೋರ್ವ ಈಜು ತಾರೆ ಜಸ್ ಸಿಂಗ್ ವೈಯಕ್ತಿಕ ನಾಲ್ಕು ಚಿನ್ನ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದರು.