Breaking NewsLatest
ಲಖೀಂಪುರ ಖೇರಿ ಹಿಂಸಾಚಾರ: ಕ್ರಮ ಕೈಗೊಳ್ಳದ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ
ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಮಂತ್ರಿ ಅಜಯ್ ಶರ್ಮಾ ಪುತ್ರ ಆಶಿಶ್ ಮಿಶ್ರಾ ಬಂಧಿಸದಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಯೋಗಿ ಆದಿತ್ಯನಾಥ ಸರ್ಕಾರವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಆರೋಪಿ ವಿರುದ್ಧ ಗಂಭೀರ ಆರೋಪವಿದೆ ಎಂದ ಸಿಜೆಐ ಎನ್ವಿ ರಮಣ, ಯಾಕೆ ಮಂತ್ರಿ ಪುತ್ರನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಪೊಲೀಸರ ನಡೆಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರದ ಪರವಾಗಿ ನ್ಯಾಯಾಲಯದ ಎದುರು ಹಾಜರಾಗಿದ್ದ ವಕೀಲ ಹರೀಶ್ ಸಾಳ್ವೆ, ನ್ಯಾಯಾಲಯ ಕೇಳಿದರೆ ಸಿಬಿಐಗೆ ಪ್ರಕರನ ವರ್ಗಾಯಿಸುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ನೇತೃತ್ವದ ಪೀಠ, ಸಿಬಿಐ ತನಿಖೆಯೇ ಪರಿಹಾರವಲ್ಲ ಎಂದು ಹೇಳಿತು.