Breaking News

ಸಿದ್ದರಾಮಯ್ಯ ಅವರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ: ವಿ ಶ್ರೀನಿವಾಸ್ ಪ್ರಸಾದ್

ಮೈಸೂರು: ಸಿದ್ದರಾಮಯ್ಯ ಅವರನ್ನು ಒಂದು ತಿಂಗಳ ಮಟ್ಟಿಗೆ ಅಫ್ಘಾನಿಸ್ತಾನಕ್ಕೆ ಕಳುಹಿಸುವಂತೆ ಸಂಸದ ವಿ ಶ್ರೀನಿವಾಸ ಪ್ರಸಾದ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದಷ್ಟೆ ಜವಾಬ್ದಾರಿ ಪ್ರತಿ ಪಕ್ಷಕ್ಕೂ ಇರುತ್ತದೆ. ಸಿದ್ದರಾಮಯ್ಯ ಉದ್ವೇಗದಿಂದ ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ.
ಪ್ರತಿ ಪಕ್ಷದ ನಾಯಕನಿಗೆ ಬಹಳ ತಾಳ್ಮೆ ಇರಬೇಕು. ರಾಷ್ಟ‌ಮಟ್ಟದ ರಾಜಕಾರಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರ ಮಾತಿನಿಂದ ಆಡಳಿತ ಪಕ್ಷದದವರೂ ತಾಳ್ಮೆ ಕಳೆದುಕೊಳ್ಳುತ್ತಾರೆ ಎಂದರು.

ಪ್ರತಿ ಪಕ್ಷದ ನಾಯಕ ತನ್ನ ಜವಾಬ್ದಾರಿ ಅರಿತು ಸರ್ಕಾರದ ವೈಪಲ್ಯ ಎತ್ತು ತೋರೊಸುವ ಪ್ರಯತ್ನ ಸರಿಯಾಗಿ ಮಾಡಬೇಕು. ಅದನ್ನ ಬಿಟ್ಟು ಅವಹೇಳನಕಾರಿ ಮಾತನಾಡ್ತಾರೆ.
ಪ್ರಧಾನ ಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ ಂದು ಅವರು ಪ್ರಶ್ನಿಸಿದರು.

ತಾಲಿಬಾನ್ ಬಗ್ಗೆ ಮಾತಾಡೋದು ಸರಿಯಲ್ಲ. ಒಂದು ತಿಂಗಳು ಸಿದ್ದರಾಮಯ್ಯ ಅಲ್ಲಿಗೆ ಕಳುಹಿಸಿಕೊಡಿ. ಅಫ್ಘಾನಿಸ್ತಾನದ ತಾಲಿಬಾನ್ ಪರಿಸ್ಥಿತಿ ನೋಡಲಿ. ಆನಂತರ ಮಾತಾನಡಲಿ ಎಂದರು.

Related Articles

Leave a Reply

Your email address will not be published. Required fields are marked *

Back to top button