Breaking NewsLatest
ಉತ್ತರಾಖಂಡದಲ್ಲಿ ಹಿಮ ಪ್ರವಾಹ; ಪರ್ವತಾರೋಹಿಗಳು ನಾಪತ್ತೆ
ಉತ್ತರಕಾಶಿ: ಭಾರೀ ಹಿಮ ಪ್ರವಾಹದಲ್ಲಿ ಸಿಲುಕಿ ಭಾರತೀಯ ನೌಕಾಪಡೆಯ 5 ಮಂದಿ ಪರ್ವತಾರೋಹಿಗಳು ಮತ್ತು ಸಹಾಯಕನೋರ್ವ ನಾಪತ್ತೆಯಾಗಿರುವ ಘಟನೆ ಉತ್ತರಾಖಂಡದ ಬಗೇಶ್ವರ ಜಿಲ್ಲೆಯ ಮೌಂಟ್ ತ್ರಿಶೂಲ್ ಶಿಖರದ ಬಳಿ ನಡೆದಿದೆ.
ನೌಕಾಪಡೆಯ ಒಟ್ಟು 20 ಮಂದಿ ಪರ್ವತಾರೋಹಿಗಳ ತಂಡ 7120 ಮೀಟರ್ ಎತ್ತರದ ಮೌಂಟ್ ತ್ರಿಶೂಲ್ಗೆ ಕಳೆದ 15 ದಿನಗಳ ಹಿಂದೆ ಯಾತ್ರೆ ಆರಂಭಿಸಿತ್ತು. ಶುಕ್ರವಾರ ಬೆಳಗ್ಗೆ ಹಿಮಪ್ರವಾಹದಲ್ಲಿ ಈ ತಂಡ ಸಿಲುಕಿಕೊಂಡಿದೆ.
ಹಿಮಪ್ರವಾಹ ಸಂಭವಿಸಿರುವ ಪ್ರದೇಶಕ್ಕೆ ಉತ್ತರಾಖಂಡದ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟನೀಯರಿಂಗ್ ಪರಿಹಾರ ತಂಡ, ಶೋಧ ಕಾರ್ಯಾಚರಣೆಗೆ ತೆರಳಿದೆ. ಜೋಶಿಮಠದ ಬಳಿ ಪ್ರತೀಕೂಲ ಹವಾಮಾನ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ.