Breaking NewsLatest
ಪ್ರತಿಭಟನೆ ದಮನಕ್ಕೆ ವಿಫಲ ಯತ್ನದ ಬಳಿಕ ರೈತರ ಹತ್ಯೆಗೇ ನಿಂತ ಬಿಜೆಪಿ: ಸಿದ್ದರಾಮಯ್ಯ
ಬೆಂಗಳೂರು: ಉತ್ತರ ಪ್ರದೇಶದ ಖಲಿಂಪುರ ಖೇರಿಯಲ್ಲಿ ರೈತರನ್ನು ಬಲಿ ಪಡೆದಿರುವ ಹಿಂಸಾಚಾರದ ವಿರುದ್ಧ ರಾಜ್ಯ ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನು ಶತ್ರುಗಳೆಂದೇ ಬಿಜೆಪಿ ಭಾವಿಸಿದೆ ಎಂದು ಟ್ವೀಟರ್ನಲ್ಲಿ ಆರೋಪಿಸಿರುವ ಅವರು, ರೈತರ ಪ್ರತಿಭಟನೆಯನ್ನು ಪೊಲೀಸರ ಮೂಲಕ ದಮನಿಸಲು ಯತ್ನಿಸಿ ವಿಫಲವಾದ ಬಳಿಕ ಈಗ ನೇರವಾಗಿ ಹತ್ಯೆಗೇ ಇಳಿದಿದೆ ಎಂದು ಟೀಕಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧವೂ ಮತ್ತೊಂದು ಟ್ವೀಟ್ನಲ್ಲಿ ಟೀಕಿಸಿರುವ ಸಿದ್ದರಾಮಯ್ಯ, ಉತ್ತರ ಪ್ರದೇಶದ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು, ಮಹಿಳೆಯರು ಮತ್ತು ಬಡವರ ಮಾನ, ಪ್ರಾಣ ಯಾವುದೂ ಸುರಕ್ಷಿತವಲ್ಲ ಎಂದಿದ್ದಾರೆ.
ಸಂವಿಧಾನವೇ ಕುಸಿದುಬಿದ್ದಿರುವ ಸನ್ನಿವೇಶದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ, ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.