ಕುಮಾರಸ್ವಾಮಿ ಹೇಳುವ ಸುಳ್ಳುಗಳಿಗೆ ಪ್ರತಿಕ್ರಿಯಿಸಲಾರೆ: ಸಿದ್ದರಾಮಯ್ಯ
ಹುಬ್ಬಳ್ಳಿ: ಕುಮಾರಸ್ವಾಮಿ ಸುಳ್ಳು ಹೇಳ್ತಾರೆ, ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ, ಇವರು ಬರೀ ಸುಳ್ಳು ಹೇಳುವುದು ಮಾಡ್ತಾರೆ. ಕುಮಾರಸ್ವಾಮಿ ಹಿಟ್ ರನ್ ಕೇಸ್ ಮಾಡ್ತಾರೆ. ಅವರೊಬ್ಬ ಸುಳ್ಳು ಹೇಳುವುದರಲ್ಲಿ ನಿಶೀಮರು, ಅದಕ್ಕೆ ಕುಮಾರಸ್ವಾಮಿಯವರ ಹೇಳಿಕೆಗಳಿಗೆ ರಿಯಾಕ್ಷನ್ ಮಾಡಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಲ್ಪ ಸಂಖ್ಯಾತರ ಪರ ಇದೇನೋ ಇಲ್ವೋ ಅನ್ನುವುದನ್ನು ಅಲ್ಪ ಸಂಖ್ಯಾತರ ಹೇಳುತ್ತಾರೆ. ಅದನ ಕುಮಾರಸ್ವಾಮಿಯವರು ಹೇಳಬೇಕಿಲ್ಲ. ಅವರು ಮಿಸಗೈಡ್ ಆದರೂ ಮಾಡಲ್ಲಿ, ಮತ್ತೊಂದೇನಾದರೂ ಹೇಳಿಕೊಳ್ಳಲ್ಲಿ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುವ ಮೂಲಕ ಕೋಪದಲ್ಲಿಯೇ ಕುಮಾರಸ್ವಾಮಿಯ ವಿರುದ್ಧ ಕೀಡಿಕಾರಿದರು.
ಸಿಎಂ ಇಬ್ರಾಹಿಂ ಅವರಿಗೆ ಪ್ರಚಾರಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ:
ಈಗಾಗಲೇ ರಾಜ್ಯದಲ್ಕಿಎರಡು ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯುತ್ತಿವೆ. ಈಗ ಪಕ್ಷದ ಎಲ್ಲರು ಹಾನಗಲ್ ಹಾಗೂ ಸಿಂದಗಿಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡುತ್ತುದ್ದೇವೆ. ಆದರೆ ಅವರನ್ನು ಯಾರು ಕೂಡಾ ಪ್ರಚಾರಕ್ಕೆ ಬರಬೇಡಿ ಅಂತಾ ಹೇಳಿಲ್ಲ. ಇದೂ ಮನೆಯ ಕಾರ್ಯವಲ್ಲ ಪಕ್ಷದ ಕಾರ್ಯವಾಗಿದೆ. ಇಬ್ರಾಹಿಂ ಪ್ರಚಾರಕ್ಕೆ ಬರಬಹುದು. ಪಕ್ಷದ ಎಲ್ಲರಿಗೂ ಕರೆದಿದ್ದೇವೆ ಕಾಂಗ್ರೆಸ್ ಕಚೇರಿಯಿಂದ್ಲೇ ಹೇಳಲಾಗಿದೆ ಯಾರಿಗೂ ಬೇಡ ಎಂದಿಲ್ಲ. ಬರುವ ದಿನಗಳಲ್ಲಿ ಅವರೇ ಬಂದು ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದರು.
ಆರ್.ಎಸ್.ಎಸ್ ಒಂದು ಕೋಮುವಾದಿ ಸಂಘಟನೆ:
ಆರ್ ಎಸ್ ಎಸ್ ಸಂಘಟನೆಯು ಒಂದು ಕೋಮುವಾದಿ ಸಂಘಟನೆಯಾಗಿದೆ. ಆ ಸಂಘಟನೆಯು ಮನುಸ್ಮೃತಿ, ಶ್ರೇಣೀಕೃತ ನಂವಿಕೆ ಇಟ್ಟುಕೊಂಡಿದೆ. ಹಾಗಾಗಿ ಆರ್ ಎಸ್ ಎಸ್ ನ್ನು ನಾನು 1971 ರಿಂದಲೂ ವಿರೋಧ ಮಾಡುತ್ತಾ ಬಂದಿದ್ದೇನೆ. ಇಂದು ನಿನ್ನೆ ಆರ್ ಎಸ್ ಎಸ್ ಅನ್ನು ವಿರೋಧ ಮಾಡುತ್ತಿಲ್ಲ, ರಾಜಕೀಯ ಪ್ರವೇಶ ಮಾಡಿದಾಗಿನಿಂದಲ್ಲೂ ವಿರೋಧದಿಸುತ್ತಲ್ಲೇ ಬರುತ್ತಿದ್ದೇನೆ. ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನ ಆರ್.ಎಸ್.ಎಸ್ ಮಾಡುತ್ತಿದೆ. ಬಿಜೆಪಿಯಲ್ಲಿ ಒಬ್ಬರಾದ್ರೂ ಮುಸ್ಲಿಂ ಎಂ.ಎಲ್.ಎ ಇದ್ದಾರಾ..?, ಆರ್.ಎಸ್.ಎಸ್ ಅಲ್ಪಸಂಖ್ಯಾತರ ವಿರುದ್ಧ ಇದೆ. ಈಶ್ವರಪ್ಪ ಮುಸ್ಲಿಂರಿಗೆ ಬಂದು ಆಫೀಸ್ ನಲ್ಲಿ ಕಸಾ ಹೊಡಿ ಅಂತಾರೆ. ಇದು ಮಾನವೀಯತೆನಾ..? ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಾರೆ. ಸಂವಿಧಾನ ಬರೆದವರು ಯಾರು? ಸಂವಿಧಾನದ ವಿರುದ್ಧ ಇರುವವರೇ ಈ ಬಿಜೆಪಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಲಿ ಸಿಎಂ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು:
ಸಂಗೂರು ಮೈಶುಗರ್ ಕಾರ್ಖಾನೆ ಹಾಳು ಮಾಡುವುದರಲ್ಲಿ ಕಾಂಗ್ರೆಸ್ ಪಾತ್ರ ಹೆಚ್ಚಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಆ ಕಾರ್ಖಾನೆಯ ಅಧ್ಯಕ್ಷ ಉದಾಸಿ, ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಹಾಗಿದ್ಮೇಲೆ ಅದನ್ನು ಕಾಂಗ್ರೆಸ್ ಹೇಗೆ ಹಾಳು ಮಾಡಲು ಸಾಧ್ಯ. ಅಲ್ಲದೆ ಸಂಗೂರು ಮೈ ಶುಗರ ಇಂದಿನ ಪರಿಸ್ಥಿತಿಗೆ ಬಿಜೆಪಿ ಕಾರಣ ಅವರಿದಂದಲ್ಲೇ ಹಾಳಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದೇ ಅದರಲ್ಲಿ ಯಾವ ತಪ್ಪಿದೆ. ಈ ಹಿಂದೆ ಕಟಕೋಟಿಯವರು ಅಧ್ಯಕ್ಷರಾಗಿದ್ದಾಗ ಕಾರ್ಖಾನೆ ಲಾಭದಲ್ಲಿ ಇತ್ತು. ಅದೇ ಉದಾಸಿ, ಸಜ್ಜನ ಬಂದ ಮೇಲೆ ಹೇಗೆ ಲಾಸ್ ಆಯಿತ್ತು ಎನ್ನುವ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಮೂಲಕ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿವರ ಹೇಳಿಕೆ ತಿರುಗೇಟು ನೀಡಿದರು.