ದೇವೇಗೌಡ ನಿರ್ವಹಿಸಿದ ಹುದ್ದೆ ಕೂಡ ಪುಟಗೋಸಿಯಾ?; ಎಚ್ಡಿಕೆಗೆ ಸಿದ್ದರಾಮಯ್ಯ ತಿರುಗೇಟು
ಕಲಬುರಗಿ: ನನ್ನನ್ನು ಕಂಡ್ರೆ ಕುಮಾರಸ್ವಾಮಿಗೆ ಭಯ ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಿ ಮಾತಾಡ್ತಾರೆ ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿದ್ದು, ‘ವಿರುದ್ಧ ಪಕ್ಷದ ನಾಯಕ ಸ್ಥಾನ’ ಪುಟ್ಟಗೋಸಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೆಂಡಕಾರಿದರು. ವಿರೋಧ ಪಕ್ಷದ ನಾಯಕ ಸ್ಥಾನ ಸಾಂವಿಧಾನಿಕವಾದದ್ದು, ಎರಡು ಬಾರಿ ಮುಖ್ಯಮಂತ್ರಿಯಾದವರು ಸಂವಿಧಾನಿಕ ಹುದ್ದೆಗೆ ಅವಮಾನ ಮಾಡುವುದು ಸರಿನಾ? ಈ ಹಿಂದೆ ದೇವೇಗೌಡರು ಸಹ ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡ ನಿರ್ವಹಿಸಿದ ಹುದ್ದೆ ಕೂಡ ಪುಟಗೋಸಿಯಾ ಎಂದು ಪ್ರಶ್ನೆ ಮಾಡಿದರು.
ರಾಜಕೀಯದಲ್ಲಿ ಭಯ ಇರೋರು ಟಾರ್ಗೆಟ್ ಮಾಡೋದು ಸಹಜ. ಕುಮಾರಸ್ವಾಮಿಗೆ ನನ್ನನ ಕಂಡ್ರೆ ಭಯ ಹೀಗಾಗಿ ಟಾರ್ಗೆಟ್ ಮಾಡ್ತಿದ್ದಾರೆ. ಕಾಲ್ಕೆರಕೊಂಡು ಜಗಳಕ್ಕೆ ಬರ್ತಿದ್ದಾರೆ. 50 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಹೆದರಿಸೋ, ಬೇದರಿಸೋ ಅನೇಕರನ್ನು ಕಂಡಿದ್ದೇನೆ. ದೇವೆಗೌಡರು ಸಿಎಂ ಆದ್ಮೇಲೆ ರಾಜಕೀಯಕ್ಕೆ ಬಂದವರು ಕುಮಾರಸ್ವಾಮಿ, ಇತ್ತಿಚಿಗೆ ರಾಜಕೀಯಕ್ಕೆ ಬಂದವರಿಂದ ನಾನು ಪಾಠ ಕಲಿಬೇಕಾ ಎಂದರು.
ಕುಮಾರಸ್ವಾಮಿಗೆ ಎರಡು ನಾಲಿಗೆ!
ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದಕ್ಕೆ ನಮ್ಮ ಸರ್ಕಾರ ಇಳಿಯಬೇಕಾಯ್ತು ಅಂತಾ ಈ ಮುಂಚೆ ಹೇಳ್ತಿದ್ದ ಕುಮಾರಸ್ವಾಮಿ ಈಗ ಸರ್ಕಾರ ಬಿಳಲು ನಾನು ಕಾರಣ ಅಂತ ನನ್ನ ಹೆಸರು ಹೇಳ್ತಿದ್ದಾರೆ. ಇವರಿಗೆ ಎರಡೇರಡು ನಾಲಿಗೆ ಇವೆ.ನನ್ನ ವಿರುದ್ದ ಜನರನ್ನ ಎತ್ತಿಕಟ್ಟೋದಕ್ಕೆ, ಮೈಸೂರು ಜನರನ್ನ ಎತ್ತಿಕಟ್ಟೊಕೆ ಈ ರೀತಿ ಹೇಳುತ್ತಿದ್ದಾರೆ. ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗೋ ಸಾಧ್ಯತೆ ಇದೆ ಅಂತಾ ನಾನು ಫೋನ್ ಮಾಡಿ ಹೇಳಿದ್ದರೂ ಒಂಬತ್ತು ದಿನ ಅಮೇರಿಕಾದ ವೆಸ್ಟೆಂಡ್ ಹೋಟೆಲ್ನಲ್ಲಿದ್ರು. ಒಬ್ಬ ಮಂತ್ರಿಯನ್ನಾಗಲಿ, ಶಾಸಕರನ್ನಾಗಲಿ ಭೇಟಿ ಆಗಲಿಲ್ಲ, ಈ ಕಾರಣಕ್ಕೆ ಸರ್ಕಾರ ಹೋಗಿದೆ. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಎಸ್ವೈ ಭೇಟಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ
ಕುಮಾರಸ್ವಾಮಿ ಬಗ್ಗೆ ನಾನು ಮಾತಾಡಬಾರದು ಅಂದುಕೊಂಡಿದ್ದೆ. ಬಹಳ ಸಲ ನನ್ನ ವೈಯಕ್ತಿಕವಾಗಿ ಮಾತನಾಡುತ್ತಿರುವುದರಿಂದ ಮಾತನಾಡಬೇಕಾಗಿದೆ. ಐಟಿ ರೇಡ್ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಬಿಎಸ್ ವೈ ಬರ್ಥಡೆ ಮತ್ತು ಮೀಟಿಂಗ್ ನಲ್ಲಿ ನಾನು ಭೇಟಿ ಆಗಿದ್ದೇನೆ ಹೊರತು ವಯಕ್ತಿಕವಾಗಿ ಭೇಟಿ ಮಾಡಿಲ್ಲ. ರಾಜಕೀಯದಲ್ಲಿ ನೀತಿ ನಿಯಮಗಳು ಇರುತ್ತವೆ.ನಾನು ಅಧಿಕಾರದಲ್ಲಿರೋರನ್ನ ವೈಯಕ್ತಿಕವಾಗಿ ಭೇಟಿ ಮಾಡಲ್ಲ. ಬಿಜೆಪಿ ಜೊತೆ ಕುಮಾರಸ್ವಾಮಿ ಸೇರಿದ್ದು ಯಾಕೆ ಸನ್ಯಾಸತ್ವ ಸ್ವಿಕರಿಸೋಕಾ? ಸೆಕ್ಯೂಲರ್ ಪಾರ್ಟಿ ಅಂತ ಹೆಸರು ಇಟ್ಟುಕೊಂಡು ಕಮ್ಯೂನಲ್ ಬಿಜೆಪಿಯೊಂದಿಗೆ ಸೇರಿ ಸರ್ಕಾರ ಮಾಡ್ತಾರೆ. ಇಂತವರಿಂದ ನಾವು ಪಾಠ ಕಲೀಬೇಕಾ?.. ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದೇನೆ ಅಂತ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭೇಟಿಯಾದ ಬಗ್ಗೆ ಪ್ರೂ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿಯವರು ನನ್ನ ಮಾತುಕೇಳಿ ಐಟಿ ರೇಡ್ ಮಾಡಿಸ್ತಾರಾ. ನಾನೇನು ಪ್ರಧಾನಮಂತ್ರಿನಾ ಎಂದು ತೀರುಗೇಟು ನೀಡಿದ್ದಾರೆ.