Breaking NewsLatest

ಕಾಬೂಲ್ ಆಸ್ಪತ್ರೆ ಮೇಲಿನ ದಾಳಿಯಲ್ಲಿ ಹಿರಿಯ ತಾಲಿಬಾನಿ ಕಮಾಂಡರ್ ಸಾವು

ಕಾಬೂಲ್: ಮಂಗಳವಾರ ಕಾಬೂಲ್‌ನ ಸೇನಾ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ 19 ಮಂದಿಯಲ್ಲಿ ಕಾಬೂಲ್‌ನ ಹಿರಿಯ ತಾಲಿಬಾನ್ ಮಿಲಿಟರಿ ಕಮಾಂಡರ್ ಹಮ್ದುಲ್ಲಾ ಮೊಖ್ಲಿಸ್ ಕೂಡ ಸೇರಿದ್ದಾನೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ದಾಳಿ ವೇಳೆ ಹಮ್ದುಲ್ಲಾ ಕಡೆಯವರು ಪ್ರತಿದಾಳಿ ನಡೆಸಿದ ವೇಳೆ ಕಮಾಂಡರ್ ಹತ್ಯೆಯಾಗಿದ್ದಾರೆ. ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಎಎಫ್‌ಪಿಗೆ ತಿಳಿಸಿದ್ದಾರೆ.

ತಾಲಿಬಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಹತರಾದ ಹಕ್ಕಾನಿ ನೆಟ್‌ವರ್ಕ್‌ನ ಸದಸ್ಯ ಮತ್ತು ಬದ್ರಿ ಕಾರ್ಪ್ಸ್ ವಿಶೇಷ ಪಡೆಗಳ ಅಧಿಕಾರಿ ಮೊಖ್ಲಿಸ್ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾನೆ.

ಅಶ್ರಫ್ ಘನಿ ನೇತೃತ್ವದ ಸರ್ಕಾರದ ಪತನದ ನಂತರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮಂಗಳವಾರದ ದಾಳಿಯು ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದ ಮತ್ತೊಂದು ದುಷ್ಕೃತ್ಯವಾಗಿದೆ.

ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿರುವ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ತನ್ನ ಟೆಲಿಗ್ರಾಮ್ ಚಾನೆಲ್‌ಗಳಲ್ಲಿನ ಹೇಳಿಕೆಯಲ್ಲಿ ಐದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಹೋರಾಟಗಾರರು ಏಕಕಾಲದಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದರು ಎಂದು ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಈ ಮಧ್ಯೆ, ತಾಲಿಬಾನ್ ಪಡೆಗಳು 15 ನಿಮಿಷಗಳಲ್ಲಿ ದಾಳಿಯನ್ನು ಹಿಮ್ಮೆಟ್ಟಿಸಿದವು ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳಿದ್ದಾರೆ. ಐಎಸ್ ಬಂಡುಕೋರರು ಆಸ್ಪತ್ರೆಯಲ್ಲಿರುವ ನಾಗರಿಕರು, ವೈದ್ಯರು ಮತ್ತು ರೋಗಿಗಳನ್ನು ಗುರಿಯಾಗಿಸಲು ಬಯಸಿದ್ದರು ಎಂದು ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button