ದಸರಾ ಗಜಪಡೆಗೆ ಬೀಳ್ಕೊಡುಗೆ
ಮೈಸೂರು : ದಸರಾ ಗಜಪಡೆಗಳಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ಕೊಡಲಾಲಾಗುತ್ತಿದೆ. ಮೈಸೂರಿನ ಅರಮನೆಯಂಗಳದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡಕ್ಕಡ ಪೂಜೆ ಸಲ್ಲಿಸಿದ ಬಳಿಕ ಬೀಳ್ಕೊಡುಗೆ ನೀಡಲಾಗುತ್ತದೆ.
ಅಶ್ವತ್ಥಾಮ, ಗೋಪಾಲಸ್ವಾಮಿ ಧನಂಜಯ, ಚೈತ್ರ, ಕಾವೇರಿ ಲಕ್ಷ್ಮಿ ಆನೆಗಳಿಗೆ ವಿದಾಯ ದಸರೆಗೆ ಹೇಳಲಾಗುತ್ತಿದೆ. ಸೆಪ್ಟೆಂಬರ್ 13 ರಂದು ಮೈಸೂರಿಗೆ ಆಗಮಿಸಿದ್ದ ಈ ಎಲ್ಲಾ 8 ಆನೆಗಳನ್ನು ಆನೆ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಅಭಿಮನ್ಯು ಗೋಪಾಲಸ್ವಾಮಿಯನ್ನ ಮತ್ತಿಗೋಡು ಆನೆ ಶಿಬಿರಕ್ಕೆ ಮತ್ತು ಅಶ್ವತ್ಥಾಮ ದೊಡ್ಡ ಹರವೆ ಆನೆ ಶಿಬಿರಕ್ಕೆ ವಿಕ್ರಮ ಧನಂಜಯ, ಕಾವೇರಿಯನ್ನ ದುಬಾರೆ ಆನೆ ಶಿಬಿರಕ್ಕೆ ಚೈತ್ರ ಹಾಗೂ ಲಕ್ಷ್ಮಿ ಆನೆ ಬಂಡೀಪುರ ಅರಣ್ಯದ ರಾಮಪುರ ಕ್ಯಾಂಪ್ಗೆ ರವಾನೆ ಮಾಡಲಾಗುತ್ತಿದೆ.
ಮಜ್ಜನ ಮಾಡಿಸಿ ಪೂಜೆ ಬಳಿಕ ಲಾರಿಗಳ ಮೂಲಕ ಗಜಪಡೆ ರವಾನೆ ಮಾಡಲಾಗುತ್ತದೆ. ನಾಡಿನಿಂದ ಕಾಡಿನತ್ತ ಮುಖ ಮಾಡಿದ ಗಜಪಡೆಗೆ ಮಜ್ಜನ ಮಾಡಿಸಿದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ರವಾನೆ ಮಾಡಲಾಗುತ್ತದೆ.
ಪ್ರತೀವರ್ಷ ದಸರಾ ಜಂಬೂಸವಾರಿಗಾಗಿ ಕಾಡಿನಿಂದ ನಾಡಿಗೆ ಗಜಪಡೆ ಬಂದಿದ್ದವು. ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಕ್ಯಾಪ್ಟನ್ ಅಭಿಮನ್ಯು ಟೀಂ ತಮ್ಮೂರಿನತ್ತ ಮುಖ ಮಾಡಿದೆ.