Breaking NewsLatest

ಜಮ್ಮು ಕಾಶ್ಮೀರಕ್ಕೆ ಅಮಿತ್ ಶಾ ಭೇಟಿ; ಡ್ರೋನ್, ಶಾರ್ಪ್ ಶೂಟರ್​ಗಳ ನಿಯೋಜನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಕಾಶ್ಮೀರ ಬೇಟಿಗಾಗಿ ಇಂದು (ಶನಿವಾರ) ಶ್ರೀನಗರಕ್ಕೆ ತೆರಳಲಿದ್ದು, ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಸ್ನೈಪರ್​ಗಳು, ಡ್ರೋನ್​ಗಳು ಮತ್ತು ಶಾರ್ಪ್ ಶೂಟರ್​ಗಳನ್ನು ನಿಯೋಜಿಸಲಾಗಿದೆ.

2019ರ ಆಗಸ್ಟ್ 5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಶಾ ಮೊದಲ ಭೇಟಿ ಇದಾಗಿದೆ. ಇತ್ತೀಚೆಗೆ ಸತತ ಹತ್ಯೆಗಳು ನಡೆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡೊದ್ದಾರೆ.

ನಿಗದಿಯಾಗಿರುವಂತೆ, ಭೇಟಿಯ ಮೊದಲ ದಿನವಾದ ಇಂದು ಶ್ರೀನಗರ-ಶಾರ್ಜಾ ನಡುವಿನ ವಿಮಾನ ಹಾರಾಟಕ್ಕೆ ಶಾ ಚಾಲನೆ ನೀಡಲಿದ್ದಾರೆ. ಇತ್ತೀಚೆಗೆ ಉಗ್ರರಿಮದ ಹತ್ಯೆಯಾದವರ ಕುಟುಂಬಗಳನ್ನು ಶಾ ಭೇಟಿ ಮಾಡಲಿದ್ದಾರೆ. ಬಳಿಕ ಜಮ್ಮು ಕಾಶ್ಮೀರದಲ್ಲಿನ ಸ್ಥಿತಿಯ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಲಿದೆ. ಗಡಿಯಲ್ಲಿನ ನುಸುಳುಕೋರರ ಬಗ್ಗೆ ಈ ಸಭೆ ವಿಶೇಷ ಗಮನ ಕೇಂದ್ರೀಕರಿಸಲಿದೆ ಎಂದು ವರದಿಯಾಗಿದೆ.

ಭಾನುವಾರ ಅಮಿತದ ಶಾ ಜಮ್ಮುವಿಗೆ ಭೇಟಿ ನೀಡಲಿದ್ದು, ಅಲ್ಲಿ ಜನಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಸರಪಂಚರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ.

Related Articles

Leave a Reply

Your email address will not be published.

Back to top button